ಕರ್ನಾಟಕ

karnataka

ETV Bharat / bharat

ಅರ್ನಬ್​ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

2018ರಲ್ಲಿ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ಪತ್ರಕರ್ತ ಅರ್ನಬ್​ ಗೋಸ್ವಾಮಿಗೆ ಇದೀಗ ಸುಪ್ರೀಂಕೋರ್ಟ್​ನಿಂದ ಮಧ್ಯಂತರ ಜಾಮೀನು ಸಿಕ್ಕಿದೆ.

Arnab Goswami
Arnab Goswami

By

Published : Nov 11, 2020, 4:44 PM IST

ನವದೆಹಲಿ:2018ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಅರ್ನಬ್ ​ ಗೋಸ್ವಾಮಿ ವಿರುದ್ಧದ ಕೇಸ್​ನಲ್ಲಿ ಬಾಂಬೆ ಹೈಕೋರ್ಟ್​​ ಜಾಮೀನು ನೀಡಲು ನಿರಾಕರಣೆ ಮಾಡಿದ್ದು, ಇದನ್ನ ಪ್ರಶ್ನೆ ಮಾಡಿದ್ದ ಅರ್ನಬ್​ ಗೋಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ವಾದ - ವಿವಾದ ಆಲಿಸಿರುವ ಜಸ್ಟೀಸ್​ ಡಿವೈ ಚಂದ್ರಚೂಡ್​ ಹಾಗೂ ಇಂದಿರಾ ಬ್ಯಾನರ್ಜಿ ನಿರ್ಧಾರ ಕೈಗೊಂಡಿದ್ದಾರೆ. ಇನ್ನು 50 ಸಾವಿರ ರೂ. ಬಾಂಡ್​ ನೀಡುವಂತೆ ಸೂಚನೆ ನೀಡಿದೆ.

ಸುಪ್ರೀಂನಲ್ಲಿ ಅರ್ನಬ್​​ ಅರ್ಜಿ ವಿಚಾರಣೆ ಆರಂಭ: ಗೋಸ್ವಾಮಿ ಪರ ಹರೀಶ್​ ಸಾಳ್ವೆ ವಕಾಲತ್ತು!

ಇನ್ನು ಅರ್ನಬ್ ಗೋಸ್ವಾಮಿ ಪರ ಹರೀಶ್ ಸಾಳ್ವೆ ವಕಾಲತ್ತು ವಹಿಸಿಕೊಂಡಿದ್ದರು. ಮುಂಬೈ ಪೊಲೀಸರಿಂದ ತಮ್ಮ ಬಂಧನ ಕಾನೂನು ಬಾಹಿರವಾಗಿದ್ದು, ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಗೋಸ್ವಾಮಿ ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ ಗೋಸ್ವಾಮಿ ಉಲ್ಲೇಖ ಮಾಡಿದ್ದರು.

ABOUT THE AUTHOR

...view details