ಬಾರಾಮುಲ್ಲಾ: ಭಾರತೀಯ ಸೇನೆಯು ತನ್ನ ಸೈನಿಕರು ಮತ್ತು ಅಧಿಕಾರಿಗಳಿಗೆ ಅತಿ ಎತ್ತರದಲ್ಲಿ ಕಾರ್ಯಾಚರಣೆಗಾಗಿ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿರುವ (ಎಚ್‌ಎಡಬ್ಲ್ಯುಎಸ್) ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಶಾಲೆಯಲ್ಲಿ ತರಬೇತಿ ನೀಡುತ್ತಿದೆ.
ಸವಾಲಿನ ಕಾರ್ಯಾಚರಣೆಗಾಗಿ ಭಾರತೀಯ ಸೈನಿಕರಿಗೆ ತರಬೇತಿ..! - ಸವಾಲಿನ ಕಾರ್ಯಚರಣೆಗಾಗಿ ಭಾರತೀಯ ಸೈನಿಕರಿಗೆ ತರಬೇತಿ
ಅತ್ಯಂತ ಸವಾಲಿನ ಹಿಮಭರಿತ ಭೂಪ್ರದೇಶದ ಮೇಲೆ ಯಶಸ್ವಿ ರಕ್ಷಣಾ ಕಾರ್ಯಾಚರಣೆಗಾಗಿ, ಹೊಸ ತಂತ್ರಗಳಲ್ಲಿ ಭಾರತೀಯ ಸೈನಿಕರಿಗೆ ತರಬೇತಿ ನೀಡಲಾಗುತ್ತಿದೆ.

ಸವಾಲಿನ ಕಾರ್ಯಚರಣೆಗಾಗಿ ಭಾರತೀಯ ಸೈನಿಕರಿಗೆ ತರಬೇತಿ
ಅತ್ಯಂತ ಸವಾಲಿನ ಹಿಮಭರಿತ ಭೂಪ್ರದೇಶದ ಮೇಲೆ ಯಶಸ್ವಿ ರಕ್ಷಣಾ ಕಾರ್ಯಾಚರಣೆಗಾಗಿ, ಹೊಸ ತಂತ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಎಚ್‌ಎಡಬ್ಲ್ಯುಎಸ್ ಒಂದು ವರ್ಷದಲ್ಲಿ ಕನಿಷ್ಠ 540 ಸೈನಿಕರಿಗೆ ತರಬೇತಿ ನೀಡುತ್ತದೆ.
ಸೈನ್ಯದ ಸಿಬ್ಬಂದಿ, ಅರೆಸೈನಿಕ ಪಡೆಗಳು ಮತ್ತು ಸ್ನೇಹಪರ ರಾಷ್ಟ್ರಗಳ ಪಡೆಗಳಿಗೆ ಅತಿ ಎತ್ತರದ ಮತ್ತು ಹಿಮನದಿಯ ಭೂಪ್ರದೇಶಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಎಚ್ಎಡಬ್ಲ್ಯುಎಸ್ನ ಹಿರಿಯ ತರಬೇತುದಾರ ಲೆಫ್ಟಿನೆಂಟ್ ಕರ್ನಲ್ ದೀಪ ನಂಕರ್ ಹಮಲ್ಯಾನ್ ತಿಳಿಸಿದ್ದಾರೆ.