ಹರಿದ್ವಾರ (ಉತ್ತರಾಖಂಡ):ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಜನರು ಊಟ - ತಿಂಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಜಲಾವೃತವಾಗದ ಸ್ಥಳವಿಲ್ಲ. ಈಗ ನೀರಿನಲ್ಲಿ ವಿಷಪೂರಿತ ಹಾವುಗಳು ಬರಲಾರಂಭಿಸಿದ್ದು, ಜನಸಾಮಾನ್ಯರು ಭಯಭೀತರಾಗಿದ್ದಾರೆ.
ವಿಷಪೂರಿತ ಹಾವುಗಳ ಕಾಟ:ಲಕ್ಸರ್ ಮೇನ್ ಬಜಾರ್ನಲ್ಲಿಯೇ ಹಲವು ಹಾವುಗಳು ಹೊರಬಂದಿವೆ. ಲಕ್ಸಾರ್‌ನ ಸಂತ ಕಾಲೋನಿಯಲ್ಲಿ ಹಾವು ಹೊರ ಬರುವುದರಿಂದ ಕಾಲೋನಿ ನಿವಾಸಿಗಳು ಭಯಭೀತರಾಗಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಾವನ್ನು ಸೆರೆ ಹಿಡಿದು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಒಂದೆಡೆ ಆಗಸದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಮನೆಗಳಲ್ಲಿಯೇ ಕುಳಿತಿದ್ದಾರೆ. ಮತ್ತೊಂದೆಡೆ ಪ್ರತಿ ರಸ್ತೆಯಲ್ಲೂ ಹಾವು ಕಾಣಿಸಿಕೊಂಡು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜನರು ತಮ್ಮ ಮಕ್ಕಳ ಬಗ್ಗೆಯೂ ತುಂಬಾ ಚಿಂತಿತರಾಗಿದ್ದಾರೆ.
ಕೇದಾರನಾಥ ಯಾತ್ರೆ ಆರಂಭ:ಮಳೆಯಿಂದಾಗಿ ನದಿ, ತೊರೆಗಳು ಉಕ್ಕಿ ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಗುಡ್ಡಗಳಲ್ಲಿ ಬಿರುಕು ಕಾಣಿಸಿಕೊಂಡು ಭೂಕುಸಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಚಾರ್ಧಾಮ್ ಯಾತ್ರೆಗೆ ಬಂದ ಯಾತ್ರಾರ್ಥಿಗಳು ಹಲವೆಡೆ ಸಿಕ್ಕಿಹಾಕಿಕೊಂಡಿದ್ದಾರೆ. ಆದರೂ ಇಂದು ಹವಾಮಾನದಲ್ಲಿ ಸುಧಾರಣೆಯಾಗಿದ್ದು, ಕೇದಾರನಾಥ ಯಾತ್ರೆ ಮತ್ತೆ ಆರಂಭವಾಗಿದೆ.
50ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ:ಬಯಲು ಸೀಮೆಯಲ್ಲಿ ಮಳೆ ನಿಂತಿದ್ದರೂ ಇನ್ನೂ ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ನದಿ, ಕಾಲುವೆಗಳು ತುಂಬಿ ಹರಿಯುತ್ತಿವೆ. ಈಗಾಗಲೇ ಲಕ್ಸರ್‌ನ ಕೆಲ ಪ್ರದೇಶಗಳು ಜಲಾವೃತಗೊಂಡಿವೆ. ಸದ್ಯ 50ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ.
ಪ್ರವಾಹ ಪೀಡಿತರು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ :ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದಾಗಿ ಜನರು ಹಗಲು ರಾತ್ರಿ ಛಾವಣಿಯ ಮೇಲೆ ಕುಳಿತು ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಗುಡ್ಡ ಕುಸಿತಗೊಂಡಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತಕ್ಕೆ ರಕ್ಷಣಾ ಕಾರ್ಯಗಳು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಸ್ಥಳೀಯ ಶಾಸಕರ ಉಪಕ್ರಮದ ಮೇರೆಗೆ ಭಾರತೀಯ ಸೇನೆ ರಕ್ಷಣಾ ಕಾರ್ಯ ಕೈಗೊಂಡಿದೆ. ಸೇನಾ ಸಿಬ್ಬಂದಿ ತುಂಬಾ ಕಷ್ಟಕರವಾದ ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.