ಕರ್ನಾಟಕ

karnataka

ETV Bharat / bharat

ನಿಯಂತ್ರಣ ಕಳೆದುಕೊಂಡ ಸೇನಾ ಟ್ಯಾಂಕ್: ಲಡಾಖ್​ನಲ್ಲಿ ಯೋಧ ಸಾವು - 90ನೇ ಆರ್ಮ್​ಡ್​ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ವಿಕ್ರಮ್ ಸಿಂಗ್ ನರುಕಾ

ಲಡಾಖ್‌ನಲ್ಲಿ ಅವ್ಯವಸ್ಥೆಗೊಂಡಿದ್ದ ರಸ್ತೆಯಲ್ಲಿ ಸಾಗುತ್ತಿದ್ದ ಸೇನಾ ಟ್ಯಾಂಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಸೈನಿಕ ಸಾವನ್ನಪ್ಪಿದ್ದಾರೆ.

Ladakh
ಲ್ಯಾನ್ಸ್ ನಾಯಕ್ ವಿಕ್ರಮ್ ಸಿಂಗ್ ನರುಕಾ

By

Published : Mar 2, 2021, 6:35 AM IST

ಜುಂಜುನು (ರಾಜಸ್ಥಾನ): ಲಡಾಖ್‌ನಲ್ಲಿ ಅವ್ಯವಸ್ಥೆಗೊಂಡಿದ್ದ ರಸ್ತೆಯಲ್ಲಿ ಸಾಗುತ್ತಿದ್ದ ಸೇನಾ ಟ್ಯಾಂಕ್​ ಪಲ್ಟಿಯಾಗಿ ಭಾರತೀಯ ಸೈನಿಕ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಂಜುನು ಮೂಲದ 90ನೇ ಆರ್ಮ್​ಡ್​ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ವಿಕ್ರಮ್ ಸಿಂಗ್ ನರುಕಾ (38) ಮೃತರು ಎಂದು ಗುರುತಿಸಲಾಗಿದೆ.

ಫೆಬ್ರವರಿ 27 ರಂದು ನರುಕಾ ಮತ್ತು ಇನ್ನೊಬ್ಬ ಸೈನಿಕ ಸೇನಾ ಟ್ಯಾಂಕ್‌ನೊಂದಿಗೆ ತಮ್ಮ ರೆಜಿಮೆಂಟ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನರುಕಾ ಚಾಲನೆ ಮಾಡುತ್ತಿದ್ದ ಟ್ಯಾಂಕ್​ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನರುಕಾ ಸಾವನ್ನಪ್ಪಿದ್ದು, ಮತ್ತೋರ್ವ ಸೈನಿಕನಿಗೆ ಚಿಕಿತ್ಸೆ ಮುಂದುವರಿದಿದೆ.

ಲ್ಯಾನ್ಸ್ ನಾಯಕ್ ವಿಕ್ರಮ್ ಸಿಂಗ್ ನರುಕಾ ಸಾವಿನ ಸುದ್ದಿ ತಿಳಿದ ಕುಟುಂಬ ಹಾಗೂ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ನರುಕಾ 2002 ರಲ್ಲಿ ಭಾರತೀಯ ಸೇನೆಗೆ ಸೇರಿಕೊಂಡರು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

ABOUT THE AUTHOR

...view details