ವಿಜಯನಗರಂ (ಆಂಧ್ರಪ್ರದೇಶ): ಕರ್ತವ್ಯದಲ್ಲಿರುವಾಗಲೇ ಚಳಿಯ ತೀವ್ರತೆಗೆ ಆಂಧ್ರಪ್ರದೇಶ ಮೂಲದ ಯೋಧನೋರ್ವ ಲಡಾಖ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಭೀಮಸಿಂಘಿಯ ಚಂದ್ರ ರಾವ್ (42) ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಲಡಾಖ್‌ನ 603-ಇಎಂಇ ಬೆಟಾಲಿಯನ್‌ನಲ್ಲಿ ನಿಯೋಜನೆಗೊಂಡಿದ್ದರು. ಲಡಾಖ್‌ನಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಚಳಿಯ ತೀವ್ರತೆಗೆ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಂದ್ರರಾವ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.