ಕರ್ನಾಟಕ

karnataka

ETV Bharat / bharat

ಲೈಂಗಿಕ ದೌರ್ಜನ್ಯವೆಸಗಿ ಬಾಲಕನ ಕೊಲೆ.. ಯೋಧನ ಬಂಧಿಸಿದ ಪೊಲೀಸರು - Venkata Prashant Kumar is an Army jawan

ಆಂಧ್ರಪ್ರದೇಶದ ಬಾಲಕನ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿ ಯೋಧನನ್ನು ಬಂಧಿಸಿದ್ದಾರೆ. ಈತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡಗಳೊಂದಿಗೆ ಕಾರ್ಯಾಚರಣೆ ನಡೆಸಿ ಜನವರಿ 25ರಂದು ಬಾಲಕನ ಶವ ಪತ್ತೆ ಮಾಡಿದ್ದರು.

ARMY MAN KILLED A BOY AFTER SEXUAL ASSAULT
ಯೋಧನ ಬಂಧಿಸಿದ ಪೊಲೀಸರು

By

Published : Jan 31, 2022, 8:47 PM IST

Updated : Jan 31, 2022, 9:19 PM IST

ಅಮರಾವತಿ(ಆಂಧ್ರಪ್ರದೇಶ):ಕಳೆದ 10 ದಿನಗಳ ಹಿಂದೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಅಕ್ಕಪಲ್ಲಿಯಲ್ಲಿ ಕೊಲೆಯಾಗಿದ್ದ ಬಾಲಕನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧನೋರ್ವನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಏನಿದು ಪ್ರಕರಣ: ಆರನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ 11 ವರ್ಷದ ಬಾಲಕನು​ ಇದೇ ತಿಂಗಳ 22ರಂದು ಶಾಲೆಯಿಂದ ವಾಪಸಾಗಿ ಆಟವಾಡ್ತಿದ್ದ ವೇಳೆ ನಾಪತ್ತೆಯಾಗಿದ್ದ. ಇದಕ್ಕೆ ಸಂಬಂಧಿಸಿದಂತೆ ಪೋಷಕರು ಗಿಡ್ಡಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡಗಳೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ಜೊತೆಗೆ ಜನವರಿ 25ರಂದು ಇಡಕಮಲ್ಲುದ ಬಾವಿಯಲ್ಲಿ ಬಾಲಕನ ಶವವನ್ನು ಪತ್ತೆ ಮಾಡಿದ್ದರು.

ಯೋಧನ ಬಂಧಿಸಿದ ಪೊಲೀಸರು

ಏನಾಗಿತ್ತು?ಪ್ರಕರಣದಲ್ಲಿ ಭಾಗಿಯಾಗಿದ್ದ ಯೋಧ ವೆಂಕಟ ಪ್ರಶಾಂತ್ ಕುಮಾರ್​​ ಮೊಬೈಲ್​ನಲ್ಲಿ ಪೋರ್ನ್ ನೋಡುವ ಹವ್ಯಾಸ ಹೊಂದಿದ್ದ. ರಜೆ ಮೇಲೆ ಊರಿಗೆ ಬಂದಿದ್ದ ಆತ, ಕಳೆದ 22ನೇ ತಾರೀಖಿನಂದು ಮೊಬೈಲ್​ನಲ್ಲಿ ಪೋರ್ನ್ ವಿಡಿಯೋ ವೀಕ್ಷಿಸಿದ್ದ. ತನ್ನ ಲೈಂಗಿಕ ಬಯಕೆ ತೀರಿಸಿಕೊಳ್ಳಲು ಬಾಲಕನಿ​ಗೆ 100 ರೂ. ನೀಡಿ, ಬೈಕ್​ನಲ್ಲಿ ಆತನನ್ನ ಕರೆದುಕೊಂಡು ಹೋಗಿದ್ದ. ಈ ವೇಳೆ ಲೈಂಗಿಕ ದೌರ್ಜನ್ಯವೆಸಗಿ, ಬಳಿಕ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದ. ಇದರ ಬೆನ್ನಲ್ಲೇ ಪ್ರಕರಣದಿಂದ ತಪ್ಪಿಸಿಕೊಳ್ಳಲು ಮೃತದೇಹವನ್ನು ಬಾವಿಯಲ್ಲಿ ಎಸೆದಿದ್ದ.

ಇದನ್ನೂ ಓದಿ:ಪ.ಬಂಗಾಳ ಗವರ್ನರ್​​ ಟ್ವಿಟರ್ ಖಾತೆ ಬ್ಲಾಕ್​ ಮಾಡಿದ ಸಿಎಂ ಮಮತಾ.. ಕಾರಣ?

ಇದಾದ ಬಳಿಕ ತನಗೆ ಪರಿಚಯವಿದ್ದ ಸ್ನೇಹಿತನಿಂದ ನಕಲಿ ಪುರಾವೆ ಮೂಲಕ ಸಿಮ್ ಕಾರ್ಡ್​​​ ತೆಗೆದುಕೊಂಡು ಬಾಲಕನ ಪೋಷಕರೊಂದಿಗೆ ಮಾತನಾಡಿದ್ದನು. ಈ ವೇಳೆ ಆತನ ಅಪಹರಣ ಮಾಡಿರುವುದಾಗಿ ತಿಳಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದನು. ಹಣ ನೀಡದಿದ್ದರೆ ಬಾಲಕನ ಕೊಲೆ ಮಾಡುವುದಾಗಿ ತಿಳಿಸಿದ್ದರು. ಇದನ್ನ ಪೊಲೀಸರ ಮುಂದೆ ಪೋಷಕರು ಹೇಳಿಕೊಂಡಿದ್ದರು. ಮೊಬೈಲ್ ನಂಬರ್​​ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 31, 2022, 9:19 PM IST

ABOUT THE AUTHOR

...view details