ಪೂಂಚ್/ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಗಣಿ ಸ್ಫೋಟದಲ್ಲಿ ಓರ್ವ ಭಾರತೀಯ ಯೋಧ ಸಾವನ್ನಪ್ಪಿದ್ದು, ಇನ್ನೊಬ್ಬ ಸೈನಿಕ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಮೃತ ಯೋಧನನ್ನು ಸೆಪೋಯ್ ಕೆ ವೈದ್ಯ ಎಂದು ಗುರುತಿಸಲಾಗಿದೆ.
ಪೂಂಚ್‌ನಲ್ಲಿ ಗಣಿ ಸ್ಫೋಟ: ಓರ್ವ ಭಾರತೀಯ ಸೈನಿಕ ಸಾವು - ಪೂಂಚ್‌ನಲ್ಲಿ ಭಾರತೀಯ ಯೋಧ ಸಾವು
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‌ಒಸಿ) ಗಣಿ ಸ್ಫೋಟದಲ್ಲಿ ಓರ್ವ ಭಾರತೀಯ ಯೋಧ ಸಾವನ್ನಪ್ಪಿದ್ದು, ಇನ್ನೊಬ್ಬ ಸೈನಿಕ ಗಾಯಗೊಂಡಿದ್ದಾರೆ.
ಭಾರತೀಯ ಸೈನಿಕ ಸಾವು
ಸೆಪೋಯ್ ಕೆ ವೈದ್ಯರನ್ನು ಕೃಷ್ಣ ಘಾಟಿ ಸೆಕ್ಟರ್‌ನ ಫಾರ್ವರ್ಡ್ ಪೋಸ್ಟ್‌ನಲ್ಲಿ ಎಲ್‌ಒಸಿ ಬಳಿ ನಿಯೋಜಿಸಲಾಗಿತ್ತು. ಇಂದು ನಡೆದ ಸ್ಫೋಟದ ವೇಳೆ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೆಪೋಯ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಪ ಜಿಲ್ಲಾ ಆಸ್ಪತ್ರೆ ಮೆಂಧರ್‌ಗೆ ವರ್ಗಾಯಿಸಲಾಗಿದೆ.