ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಮರ್ವಾಹ್ ತೆಹಸಿಲ್‌ನ ಮಚ್ನಾ ಗ್ರಾಮದ ಬಳಿ ಸೇನಾ ಕಾಪ್ಟರ್ ಎಎಲ್ಎಚ್ ಧ್ರುವ ಪತನಗೊಂಡಿದೆ. ಕಾಪ್ಟರ್ನಲ್ಲಿ ಕಮಾಂಡಿಂಗ್ ಆಫೀಸರ್ ಸೇರಿ ಮೂವರು ಪ್ರಯಾಣಿಸುತ್ತಿದ್ದರು. ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ ಎಂದು ಎಂದು ತಿಳಿದುಬಂದಿದೆ.
ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಕಮಾಂಡಿಂಗ್ ಆಫೀಸರ್ ಸೇರಿ ಮೂವರಿಗೆ ಗಂಭೀರ ಗಾಯ - ಸೇನಾ ಹೆಲಿಕಾಪ್ಟರ್ ದುರಂತ
ಜಮ್ಮು ಕಾಶ್ಮೀರದ ಕಿಶ್ತ್ವಾರಾದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಮೂವರು ಕಾಪ್ಟರ್ನಲ್ಲಿದ್ದರು ಎಂದು ತಿಳಿದುಬಂದಿದೆ.
ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ
ಇಂದು ಬೆಳಗ್ಗೆ ಕಾಪ್ಟರ್ ಮರ್ವಾ ಕಡೆಗೆ ತೆರಳುತ್ತಿದ್ದಾಗ ಇಂದು ಬೆಳಗ್ಗೆ 9.40 ಕ್ಕೆ ಪತನಗೊಂಡಿದೆ. ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ ಇದಾಗಿದ್ದು, ಪತನಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಓದಿ:24 ಗಂಟೆ ಅವಧಿಯಲ್ಲಿ 2ನೇ ಎನ್ಕೌಂಟರ್: ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಹತ್ಯೆ