ಉರಿ (ಜಮ್ಮು -ಕಾಶ್ಮೀರ): ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ರಾಂಪುರ ಸೆಕ್ಟರ್‌ನಲ್ಲಿ ಇಂದು ಭಯೋತ್ಪಾದಕರು ಮತ್ತು ಸೇನಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ.
ವರದಿಗಳ ಪ್ರಕಾರ, ಹತ್ಯೆಗೀಡಾದ ಈ ಉಗ್ರರು ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ನುಸುಳಿ ಬಂದಿದ್ದರು. ಮೃತ ಉಗ್ರರಿಂದ ಐದು ಎಕೆ -47 ಗನ್, ಎಂಟು ಪಿಸ್ತೂಲ್ ಮತ್ತು 70 ಹ್ಯಾಂಡ್ ಗ್ರೆನೇಡ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ಸೇನೆ ವಶಕ್ಕೆ ಪಡೆದಿದೆ.