ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬನನ್ನು ಸೇನೆ ಹೊಡೆದುರುಳಿಸಿದೆ.
ಗಡಿ ರೇಖೆಯಲ್ಲಿ ಒಳ ನುಗ್ಗುತ್ತಿದ್ದ ಪಾಕ್ ಉಗ್ರನನ್ನು ಬೇಟೆಯಾಡಿದ ಭಾರತೀಯ ಸೇನೆ - ಪಾಕ್ ಉಗ್ರನನ್ನು ಹೊಡೆದುರುಳಿಸಿದ ಆರ್ಮಿ,
ಗಡಿ ರೇಖೆಯಲ್ಲಿ ಒಳ ನುಗ್ಗುತ್ತಿದ್ದ ಪಾಕ್ ಉಗ್ರನನ್ನು ಸೇನೆ ಹೊಡೆದುರುಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.
![ಗಡಿ ರೇಖೆಯಲ್ಲಿ ಒಳ ನುಗ್ಗುತ್ತಿದ್ದ ಪಾಕ್ ಉಗ್ರನನ್ನು ಬೇಟೆಯಾಡಿದ ಭಾರತೀಯ ಸೇನೆ Army foils infiltration bid on LoC, militant killed, Srinagar news, Army kills Pakistani militant, ಎಲ್ಒಸಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ, ಉಗ್ರನ ಹತ್ಯೆ, ಶ್ರೀನಗರ ಸುದ್ದಿ, ಪಾಕ್ ಉಗ್ರನನ್ನು ಹೊಡೆದುರುಳಿಸಿದ ಆರ್ಮಿ,](https://etvbharatimages.akamaized.net/etvbharat/prod-images/768-512-13738803-85-13738803-1637898931527.jpg)
ಗಡಿ ರೇಖೆಯಲ್ಲಿ ಒಳ ನುಗ್ಗುತ್ತಿದ್ದ ಪಾಕ್ ಉಗ್ರನನ್ನು ಭೇಟೆಯಾಡಿದ ಭಾರತೀಯ ಸೇನೆ
ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ಮಾತನಾಡಿ, ನವೆಂಬರ್ 25 ರಂದು ರಾತ್ರಿ ಜಮ್ಮು ಮತ್ತು ಕಾಶ್ಮೀರದ ಭಿಂಬರ್ ಗಲಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಿದರು. ಎಚ್ಚೆತ್ತ ಭಾರತೀಯ ಸೇನಾ ಪಡೆಗಳು ಒಳನುಸುಳುವಿಕೆಯ ಪ್ರಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಿದವು.
ಕಾರ್ಯಾಚರಣೆ ವೇಳೆ ಪಾಕಿಸ್ತಾನಿ ಉಗ್ರನೊಬ್ಬನನ್ನು ಸೇನೆ ಹೊಡೆದುರುಳಿಸಿದೆ. ಉಗ್ರನ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Last Updated : Nov 26, 2021, 10:58 AM IST