ಜಮ್ಮು:ನಗರದ ಹೊರವಲಯದಲ್ಲಿರುವ ಅರ್ನಿಯಾ ಪ್ರದೇಶದಲ್ಲಿ ಸೇನೆಗೆ ಸಂಬಂಧಿಸಿದ ಜಾಗಗಳ ಫೋಟೋಗಳನ್ನು ತೆಗೆಯುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. 11 ಅನುಮಾನಾಸ್ಪದವಾಗಿ ನಡೆದು ಕೊಂಡಿರುವುದು ಕಂಡು ಬಂದ ಹಿನ್ನೆಲೆ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಮೂಲಗಳು ದೃಢ ಪಡಿಸಿರುವಂತೆ, ಸೇನೆ (ಟೆರಿಟೋರಿಯಲ್ ಆರ್ಮಿ) ಪಡೆಗಳು ಶುಕ್ರವಾರ ಜಮ್ಮು ಜಿಲ್ಲೆಯ ಅರ್ನಿಯಾ ಬೆಲ್ಟ್ನ ಗಡಿಯಿಂದ 11 ವ್ಯಕ್ತಿಗಳನ್ನು ತಮ್ಮ ಅನುಮಾನಾಸ್ಪದ ಚಟುವಟಿಕೆಗಳಿಗಾಗಿ ಬಂಧಿಸಿದ್ದು, ಅವರು ಪ್ರದೇಶದಲ್ಲಿನ ಕೆಲವು ಪ್ರಮುಖ ಸೇನಾ ಕ್ಷೇತ್ರದ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದರು" ಎಂದು ತಿಳಿಸಿದೆ. ಆದರೆ ಬಂಧಿತರ ಹೆಚ್ಚಿನ ವಿವರವನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.
"ಬಂಧಿತರ ಮೊಬೈಲ್ ಫೋನ್ಗಳಲ್ಲಿ ಪಾಕಿಸ್ತಾನದ ಕೆಲವು ಸಂಪರ್ಕ ಸಂಖ್ಯೆಗಲು ಸಿಕ್ಕಿವೆ. ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಎಲ್ಲರನ್ನೂ ವಿಚಾರಣೆಗಾಗಿ ಸೇನಾ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಐವರು ಕಾರ್ಮಿಕರು ಮತ್ತು ಉಳಿದ ಆರು ಮಂದಿ ಪೂಂಚ್ ಜಿಲ್ಲೆಗಳ ವಿವಿಧ ಪ್ರದೇಶಗಳಿಗೆ ಸೇರಿದವರು" ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು,"ಕಳೆದ ವರ್ಷ 180 ಉಗ್ರರನ್ನು ತಟಸ್ಥಗೊಳಿಸಲಾಗಿದೆ. ನಾಗರಿಕ ಹತ್ಯೆಗಳಲ್ಲಿ ಶೇಕಡಾ 55 ರಷ್ಟು ಮತ್ತು ಭದ್ರತಾ ಪಡೆಗಳ ಹುತಾತ್ಮತೆಯಲ್ಲಿ ಶೇಕಡಾ 58 ರಷ್ಟು ಇಳಿಕೆಯಾಗಿದೆ. ಭದ್ರತಾ ಗ್ರಿಡ್ ಅನ್ನು ಬಲಪಡಿಸಲಾಗಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಹಣಕಾಸು ಒದಗಿಸುವ ಮೇಲೆ ನೇರ ದಾಳಿಯ ಮೂಲಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ" ಎಂದು ಗುರುವಾರ ಹೇಳಿದ್ದಾರೆ.
ಬುಧವಾರ, ಭದ್ರತಾ ಪಡೆಗಳು ಪೂಂಚ್ನಲ್ಲಿ ಎರಡು ಅಡಗುತಾಣಗಳನ್ನು ಭೇದಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಯಲ್ಲಿ ಎರಡು ಎಕೆ ರೈಫಲ್ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.