ಬಂಡಿಪೋರಾ (ಜಮ್ಮು-ಕಾಶ್ಮೀರ):ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಕಣಿವೆಯ ತುಲೈಲ್ ಕ್ವಾರ್ಟರ್‌ನಲ್ಲಿರುವ ಗುಜ್ರಾನ್ ನಲ್ಲಾ ಪ್ರದೇಶದಲ್ಲಿ ಸಂಭವಿಸಿದ ಸೇನಾ ಹೆಲಕಾಪ್ಟರ್ ಪತನದಲ್ಲಿ ಒಬ್ಬ ಪೈಲಟ್ ಸಾವನ್ನಪ್ಪಿದ್ದಾರೆ.
ಸೇನಾ ಹೆಲಿಕಾಪ್ಟರ್ ಪತನ: ಒಬ್ಬ ಪೈಲಟ್ ಸಾವು, ಇನ್ನೊಬ್ಬರಿಗೆ ಗಾಯ
ಸೇನಾ ಹೆಲಿಕಾಪ್ಟರ್ ಪತನದಲ್ಲಿ ಒಬ್ಬ ಪೈಲಟ್ ನಿಧನ ಹೊಂದಿದ್ದು, ಇನ್ನೊಬ್ಬ ಪೈಲಟ್ಗೆ ಗಾಯಗಳಾಗಿವೆ.
ಕಾಶ್ಮೀರದ ಗುಜ್ರಾನ್ ನಲ್ಲಾ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ
ಶುಕ್ರವಾರ ಮಧ್ಯಾಹ್ನ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಪೈಲಟ್ಗಳು ಇಲ್ಲದ ಕಾರಣ ಅವರಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬ ಪೈಲಟ್ಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸೇನಾ ಅಧಿಕಾರಿಗಳಿಂದ ಯಾವುದೇ ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ.
ಘಟನೆ ಸಂಭವಿಸಿದ ಬಳಿಕ ಸೇನಾ ಹೆಲಿಕಾಪ್ಟರ್ನೊಂದಿಗಿನ ಸಂಪರ್ಕ ಕಡಿತಗೊಂಡಿತ್ತು ಎಂದು ಎಸ್ಡಿಎಂ ಗುರೇಜ್ ತಿಳಿಸಿದ್ದರು.
Last Updated : Mar 11, 2022, 4:26 PM IST