ನವದೆಹಲಿ:ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾನೆ ಅವರು ನೇಪಾಳದ ಸೇನಾ ಮುಖ್ಯಸ್ಥ ಪೂರ್ಣ ಚಂದ್ರ ಥಾಪಾ ಅವರೊಂದಿಗೆ ದೂರವಾಣಿ ಸಂವಾದ ನಡೆಸಿದ್ದು, ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿಷಯಗಳ ಬಗ್ಗೆ ನಿನ್ನೆ ಚರ್ಚಿಸಿದ್ದಾರೆ.
ಜನರಲ್ ಎಂಎಂ ನರವಾನೆ ಸಿಒಎಎಸ್ ನೇಪಾಳಿ ಸೇನೆಯ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ದ್ವಿಪಕ್ಷೀಯ ರಕ್ಷಣಾ ಸಹಕಾರದ ಅಂಶಗಳನ್ನು ಚರ್ಚಿಸಿದ್ದಾರೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ. ಕಳೆದ ಗುರುವಾರ, ನರವಾನೆ ಗ್ರೀಸ್‌ನ ಲೆಫ್ಟಿನೆಂಟ್ ಜನರಲ್ ಚರಲಾಂಪೋಸ್ ಲಲೌಸಿಸ್‌ನೊಂದಿಗೆ ವಿಡಿಯೋ ಟೆಲಿಫೋನಿಕ್ ಸಂವಾದ ನಡೆಸಿದ್ದರು. ದ್ವಿಪಕ್ಷೀಯ ರಕ್ಷಣಾ ಸಹಕಾರದ ಅಂಶಗಳನ್ನು ಚರ್ಚಿಸಿದರು.