ಪಶ್ಚಿಮ ಬಂಗಾಳ: ಉತ್ತರ ಬಂಗಾಳವನ್ನು ವಿಭಜಿಸಿ, ಅಶಾಂತಿ ಸೃಷ್ಟಿಸಲು ರಾಜ್ಯದ ಬಿಹಾರ ಸೇರಿದಂತೆ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ವಿಐಪಿಗಳ ಟಿಂಟೆಡ್ ಗ್ಲಾಸ್ ವಾಹನದ ಮೂಲಕ ಶಸ್ತ್ರಾಸ್ತ್ರ ಮತ್ತು ಹಣದ ಕಳ್ಳಸಾಗಣೆ ನಡೆಸಲಾಗುತ್ತಿದೆ. ಬಿಹಾರ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆ ನಡೆಸುವ ಮೂಲಕ ದೇಶದ ಉತ್ತರ ಭಾಗ ವಿಭಜನೆ ಮಾಡುವ ಅಶಾಂತಿ ಯತ್ನ ನಡೆಸಲಾಗುತ್ತಿದೆ. ಇದನ್ನು ನಾವು ಪತ್ತೆ ಮಾಡಬೇಕಿದೆ. ಇದಕ್ಕಾಗಿ ನಾಕ ಬಂಧಿಯನ್ನು ಹೆಚ್ಚಿಸಬೇಕಿದೆ ಎಂದು ಅವರು ಆಡಳಿತ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ತಿಳಿಸಿದರು.
ಇಂತಹ ಕೃತ್ಯ ಎಸಗಲು ಪಶ್ಚಿಮ ಬಂಗಾಳದ ಹೊರಗಿನ ಜನರನ್ನು ನಿಯೋಜಿಸಲಾಗುತ್ತಿದ್ದು, ಅವರು ವಿಐಪಿ ವಾಹನದ ದುರುಪಯೋಗವನ್ನು ಪಡೆಯುತ್ತಿದ್ದಾರೆ. ಅವರು ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತು ತರುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಅವರು ಪಿತೂರಿ ನಡೆಸುತ್ತಿದ್ದಾರೆ.