ಚಂಡೀಗಢ (ಪಂಜಾಬ್): ಕೆಲ ದಿನಗಳ ಹಿಂದೆ ನಡೆದ ಹಿಂದೂ ಮುಖಂಡ ಸುಧೀರ್ ಸೂರಿ ಮತ್ತು ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ ಹತ್ಯೆಯ ನಂತರ ಪಂಜಾಬ್ ಸರ್ಕಾರ ಎಚ್ಚೆತ್ತುಕೊಂಡಿದೆ. ಬಂದೂಕು ಸಂಸ್ಕೃತಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರ, ಹೊಸ ಬಂದೂಕು ಪರವಾನಗಿ ನೀಡುವುದನ್ನು ನಿಲ್ಲಿಸಿದೆ.
ಅಷ್ಟೇ ಅಲ್ಲ, ಇದುವರೆಗೆ ನೀಡಿರುವ ಎಲ್ಲ ಅಸಲಿ ಪರವಾನಗಿಗಳನ್ನು ಮುಂದಿನ ಮೂರು ತಿಂಗಳಲ್ಲಿ ಪರಿಶೀಲಿಸುವಂತೆಯೂ ಆದೇಶ ಹೊರಡಿಸಲಾಗಿದೆ. ಪಂಜಾಬ್ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ ಮತ್ತು ಅದನ್ನು ಎಲ್ಲ ಜಿಲ್ಲೆಗಳಿಗೂ ರವಾನಿಸಲಾಗಿದೆ.
ಇದನ್ನೂ ಓದಿ:ಹಾಡಹಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥನಿಗೆ ಗುಂಡಿಕ್ಕಿ ಕೊಲೆ
ಪಂಜಾಬ್ ಸಿಎಂ ಭಗವಂತ್ ಮಾನ್ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ ಬಂದೂಕು ಸಂಸ್ಕೃತಿ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಇದುವರೆಗೆ ನೀಡಲಾದ ಎಲ್ಲಾ ಬಂದೂಕು ಪರವಾನಗಿಗಳನ್ನು ಸಂಪೂರ್ಣ ಪರಿಶೀಲಿಸುವಂತೆ ಸೂಚಿಸಲಾಗಿದೆ. ಇದರೊಂದಿಗೆ ಹೊಸ ಬಂದೂಕು ಪರವಾನಗಿ ನೀಡುವುದನ್ನು ಕೂಡ ನಿಷೇಧಿಸಲಾಗಿದೆ.
ಜಿಲ್ಲಾಧಿಕಾರಿ ವೈಯಕ್ತಿಕವಾಗಿ ತೃಪ್ತರಾಗುವವರೆಗೆ ಹೊಸ ಬಂದೂಕು ಪರವಾನಗಿ ನೀಡಲಾಗುವುದಿಲ್ಲ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಆಯುಧಗಳ ಪ್ರದರ್ಶನವನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಜ್ಯದಲ್ಲಿ ದಿಢೀರ್ ತಪಾಸಣೆಗೆ ಪೊಲೀಸರಿಗೂ ಆದೇಶ ನೀಡಲಾಗಿದೆ.
ದ್ವೇಷ ಪ್ರಚೋದಾನತ್ಮಕ ವಿರುದ್ಧ ಪ್ರಕರಣ ದಾಖಲು: ಸಿಎಂ ಭಗವಂತ್ ಮಾನ್ ದ್ವೇಷದ ಭಾಷಣಕ್ಕೆ ಕಡಿವಾಣ ಹಾಕಲು ಯತ್ನಿಸಿದ್ದಾರೆ. ಯಾರಾದರೂ ಯಾವುದೇ ಜಾತಿ, ಸಮುದಾಯದ ವಿರುದ್ಧ ನಿಂದನೀಯ ಪದಗಳನ್ನು ಬಳಸಿದರೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.
ಇದನ್ನೂ ಓದಿ:13 ದಿನಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ರೈಲು ಮಾರ್ಗದ ಸೇತುವೆ ಸ್ಫೋಟಿಸಲು ಯತ್ನ
ಹಾಡುಗಳಲ್ಲಿ ಬಂದೂಕು ಸಂಸ್ಕೃತಿಯನ್ನು ಉತ್ತೇಜಿಸುವುದನ್ನು ಸರ್ಕಾರವೂ ನಿಷೇಧಿಸಿದೆ. ಶಸ್ತ್ರಾಸ್ತ್ರಗಳು ಅಥವಾ ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ನಿಷೇಧಿಸಲಾಗುವುದು. ಜೊತೆಗೆ ಸಾರ್ವಜನಿಕ ಸಭೆ, ಧಾರ್ಮಿಕ ಕಾರ್ಯಕ್ರಮ, ಮದುವೆ ಅಥವಾ ಇತರೆ ಕಾರ್ಯಕ್ರಮಗಳಲ್ಲಿ ಆಯುಧ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಜನರ ಜೀವ ಹಾಗೂ ಆಸ್ತಿಪಾಸ್ತಿಗೆ ಧಕ್ಕೆ ಉಂಟು ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಲಾಗಿದೆ.
33 ಪೊಲೀಸ್ ಅಧಿಕಾರಿಗಳೂ ವರ್ಗಾವಣೆ: ಕಳೆದ ಕೆಲ ದಿನಗಳಲ್ಲಿ ಪಂಜಾಬ್ ನಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಬಳಿಕ ರಾಜ್ಯ ಸರ್ಕಾರ ಮತ್ತೊಂದು ಕಠಿಣ ಕ್ರಮವನ್ನು ಕೈಗೊಂಡಿದೆ. ಶನಿವಾರ ಸರ್ಕಾರವು ರಾಜ್ಯದ 33 ಐಪಿಎಸ್ ಮತ್ತು ಪಿಪಿಎಸ್ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇದರ ಅಡಿಯಲ್ಲಿ ರಾಜ್ಯದ ಎಲ್ಲ ಮೂರು ದೊಡ್ಡ ನಗರಗಳ ಪೊಲೀಸ್ ಕಮಿಷನರ್‌ಗಳನ್ನೂ ಬದಲಾಯಿಸಲಾಗಿದೆ. ಇದಲ್ಲದೆ, ಎಸ್‌ಟಿಎಫ್ ಮತ್ತು ಎಜಿಟಿಎಫ್‌ನ ಪೊಲೀಸ್ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:ಧರ್ಮ ನಿಂದನೆ ಪ್ರಕರಣದ ಆರೋಪಿ ಹತ್ಯೆ ಕೇಸ್: ಮೂವರು ಶೂಟರ್ಗಳನ್ನು ಬಂಧಿಸಿದ ಪೊಲೀಸರು