ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹವನ್ನು ಪತ್ತೆ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ಮಂಡಿಯ ಸಾವ್ಜಿಯಾನ್ ಪ್ರದೇಶದಲ್ಲಿ ಬುಧವಾರ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ಈ ಘಟನೆ ನಡೆದು ಒಂದು ದಿನದ ನಂತರ ಭಾರಿ ಪ್ರಮಾಣ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.
ಓರ್ವ ಭಯೋತ್ಪಾದಕನ ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ಮತ್ತೊಬ್ಬನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಕೌಂಟರ್ ಸ್ಥಳದ ಬಳಿ ಎಕೆ 47 ಗನ್, ನಾಲ್ಕು ಮ್ಯಾಗಜೀನ್‌ಗಳು, ಒಂದು ಪಿಸ್ತೂಲ್ ಹಾಗೂ 44 ಪಿಸ್ತೂಲ್ಗಳು ಪತ್ತೆಯಾಗಿವೆ. ಒಂದು ಗ್ರೆನೇಡ್, ಬೈನಾಕ್ಯುಲರ್, ಒಂದು ಜೊತೆ ಶೂ, ರಾತ್ರಿ ದೃಷ್ಟಿ ಸಾಧನ, ಎರಡು ಪ್ಯಾಂಟ್, ಒಂದು ಜೊತೆ ಕೈಗವಸುಗಳು, ಎರಡು ಜಾಕೆಟ್‌ಗಳು, ಎರಡು ಶಾಲುಗಳು, ಎರಡು ರಕ್‌ಸಾಕ್ ಬ್ಯಾಗ್‌ಗಳು, ಎರಡು ವಾಕಿಂಗ್ ಸ್ಟಿಕ್‌ಗಳು, ಒಂದು ಸಿರಿಂಜ್, 16 ಬ್ಯಾಟರಿಗಳು, ಬ್ಯಾಂಡೇಜ್ ರೋಲ್‌ಗಳು, ಒಂದು ಚಾಕು ಹಾಗೂ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್, ಭದ್ರತಾ ಪಡೆಗಳಿಂದ ಜಂಟಿ ಕಾರ್ಯ: ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಗುರುವಾರ ಹೇಳಿದ್ದಾರೆ.
ಗಡಿ ಭದ್ರತಾ ಗ್ರಿಡ್ ಕೂಡ ಎಂದಿಗೂ ಹೆಚ್ಚು ಪ್ರಬಲವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಲು ಇತರ ಭದ್ರತಾ ಪಡೆಗಳೊಂದಿಗೆ ಪೊಲೀಸರು ಸಂಪೂರ್ಣ ಜಾಗರೂಕರಾಗಿದ್ದಾರೆ. ಭಯೋತ್ಪಾದನೆ ಮುಕ್ತ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಿಸಲು ನಾವು ಮಿಷನ್ ಮೋಡ್‌ನಲ್ಲಿ ನಮ್ಮ ಪ್ರಯತ್ನ ಮುಂದುವರಿಸಬೇಕಾಗಿದೆ ಎಂದರು.