ಜಮ್ಮುಕಾಶ್ಮೀರ: ಅಂತಾರಾಷ್ಟ್ರೀಯ ಗಡಿ ಸಮೀಪ ಪಾಕಿಸ್ತಾನದಿಂದ ಡ್ರೋನ್ ಮೂಲಕ ಇಳಿಸಲಾಗಿದೆ ಎನ್ನಲಾದ ಎಕೆ 47 ರೈಫಲ್ ಸೇರಿದಂತೆ ಆಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಡ್ರೋಣ್ ಮೂಲಕ ಗಡಿಯಲ್ಲಿ ಶಸ್ತ್ರಾಸ್ತ್ರ ಇಳಿಸಿದ ಪಾಕ್; ಸಂಭಾವ್ಯ ದಾಳಿ ತಪ್ಪಿಸಿದ ಭದ್ರತಾ ಪಡೆ - suspected drone
ಪಾಕಿಸ್ತಾನವು ಡ್ರೋನ್ ಮೂಲಕ ಇಳಿಸಿದೆ ಎನ್ನಲಾದ ಎಕೆ 47 ರೈಫಲ್, ಮೂರು ಮ್ಯಾಗಜೀನ್ಗಳು, 30 ರೌಂಡ್ಸ್ಗಳು ಹಾಗು ಟೆಲಿಸ್ಕೋಪ್ ಅನ್ನು ಜಮ್ಮು ಅಂತಾರಾಷ್ಟ್ರೀಯ ಗಡಿ ಸಮೀಪ ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಪಾಕಿಸ್ತಾನದಿಂದ ಶಂಕಿತ ಡ್ರೋನ್ ಹಾರಾಟ ಮಾಡುತ್ತಿರುವ ಕುರಿತು ಸ್ಥಳೀಯರು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶನಿವಾರ ತಡರಾತ್ರಿ ಗಡಿಯಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಫಲೈನ್ ಮಂಡಲ್‌ನ ಸೌಂಜನಾ ಗ್ರಾಮದ ಬಳಿ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಎಕೆ 47 ರೈಫಲ್, ಮೂರು ಮ್ಯಾಗಜೀನ್ಗಳು, 30 ರೌಂಡ್ಸ್ಗಳು, ಟೆಲಿಸ್ಕೋಪ್ ದೊರೆತಿದೆ.
ಭಾರತದ ಕಡೆಯಿಂದ ಆ ಶಸ್ತ್ರಾಸ್ತ್ರಗಳನ್ನು ಪಡೆಯಬೇಕಿದ್ದ ವ್ಯಕ್ತಿ ಯಾರೆಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪಾಕಿಸ್ತಾನ ಮತ್ತೆ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದು, ಗಡಿಯಲ್ಲಿ ಕಳೆದ ಒಂದು ವರ್ಷದಿಂದ ಡ್ರೋನ್ ಹಾರಾಟ ಹೆಚ್ಚುತ್ತಲೇ ಇದೆ. ಇದು ಗಡಿ ಕಾಯುತ್ತಿರುವ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.