ಪುಣೆ (ಮಹಾರಾಷ್ಟ್ರ): ಸೇನಾಪಡೆಗಳು ಲಿಂಗ ತಟಸ್ಥವಾಗಿವೆ ಮತ್ತು ಈಗಾಗಲೇ ಹೋರಾಟದ ಹುದ್ದೆಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾಯುಪಡೆಯಲ್ಲಿ ಮಹಿಳಾ ಫೈಟರ್ ಪೈಲಟ್‌ಗಳಿದ್ದು, ವಾಯು ಕಾರ್ಯಾಚರಣೆ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಹೇಳಿದ್ದಾರೆ.
ಮುಂಬರುವ ವರ್ಷಗಳಲ್ಲಿ ಮಹಿಳೆಯರಿಗಾಗಿ ಉಳಿದಿರುವ ಎಲ್ಲ ಶಾಖೆಗಳನ್ನು ತೆರೆಯಲಾಗುವುದು ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಹೇಳಿದರು. ಮಹಾರಾಷ್ಟ್ರದ ಪುಣೆಯ ಖಡಕ್‌ವಾಸ್ಲಾದಲ್ಲಿ ಬುಧವಾರ ನಡೆದ ಎನ್‌ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಪಾಸಿಂಗ್ ಔಟ್ ಪರೇಡ್‌ನಲ್ಲಿ ಮಾತನಾಡಿದ ಅವರು, ನಾವು ಮಹಿಳಾ ನಾವಿಕರನ್ನೂ ನೇಮಿಸಿಕೊಳ್ಳಲು ಪ್ರಾರಂಭಿಸಿದ್ದೇವೆ. ಇದು ಒಂದು ಮೈಲಿಗಲ್ಲು ಸಾಧನೆಯಾಗಿದೆ ಎಂದು ಹೇಳಿದರು.