ಕರ್ನಾಟಕ

karnataka

ETV Bharat / bharat

ಚೆಸ್ ಒಲಿಂಪಿಯಾಡ್​​ ಭದ್ರತೆಯಲ್ಲಿದ್ದ ಪೊಲೀಸ್​ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಚೆನ್ನೈನ ನೆಹರೂ ಸ್ವೇಡಿಯಂನ ವಿವಿಐಪಿ ಪ್ರವೇಶ ದ್ವಾರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್​ ಕಾನ್​ಸ್ಟೇಬಲ್‌ವೊಬ್ಬರು ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.

armed-force-police-commits-suicide-at-nehru-stadium at Chennai
ಚೆನ್ನೈ: ಚೆಸ್ ಒಲಿಂಪಿಯಾಡ್​​ ಫೈನಲ್ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್​ ಆತ್ಮಹತ್ಯೆ

By

Published : Aug 3, 2022, 3:22 PM IST

ಚೆನ್ನೈ (ತಮಿಳುನಾಡು): ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್​​ ಫೈನಲ್​ಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲೇ ಸಶಸ್ತ್ರ ಪಡೆಯ ಪೊಲೀಸ್​ ಕಾನ್​ಸ್ಟೇಬಲ್​ವೊಬ್ಬರು ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ನೆಹರೂ ಸ್ಟೇಡಿಯಂನ ವಿವಿಐಪಿ ಪ್ರವೇಶ ದ್ವಾರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು.

ಮಧುರೈನ ಸೆಲ್ಲೂರು ಮೂಲದ ಸೆಂಥಿಲ್ ಕುಮಾರ್ ಅವರಿಗೆ ಪತ್ನಿ ಉಮಾ ಹಾಗೂ ಒಂದು ವರ್ಷದ ಮಗುವಿದೆ. ಕೆಲ ತಿಂಗಳಿಂದ ದಂಪತಿಯ ನಡುವೆ ಕಲಹ ಉಂಟಾಗಿದ್ದು, ಕೌಟುಂಬಿಕ ಕಲಹದಿಂದ ಸೆಂಥಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ. ಪೆರಿಯಮೇಡು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜುಲೈ 28ರಂದು ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ​​ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಆಗಸ್ಟ್​ 12ರಂದು ಪಂದ್ಯಾವಳಿ ಫೈನಲ್ ನಡೆಯಲಿದೆ.

ಇದನ್ನೂ ಓದಿ:ರಾಂಚಿಯಲ್ಲಿ ಅಪ್ರಾಪ್ತ ಫುಟ್ಬಾಲ್​ ಆಟಗಾರ್ತಿ ಎಳೆದೊಯ್ದು ಗ್ಯಾಂಗ್​ ರೇಪ್​​

ABOUT THE AUTHOR

...view details