ಆಂಧ್ರಪ್ರದೇಶ:ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಜನರ ನೆರವಿಗೆ ಧಾವಿಸಬೇಕು ಎಂದು ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗ ಅವರು ಪುಟ್ಟಪರ್ತಿ ಸತ್ಯಸಾಯಿ ಟ್ರಸ್ಟ್‌ಗೆ ಮನವಿ ಮಾಡಿದ್ದಾರೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿ ಪ್ರಶಾಂತಿ ನಿಲಯದಲ್ಲಿರುವ ಸತ್ಯಸಾಯಿ ಮಹಾ ಸಮಾಧಿಗೆ ಭೇಟಿ ನೀಡಿ, ಟ್ರಸ್ಟ್ ಕಚೇರಿಯಲ್ಲಿ ಮ್ಯಾನೇಜಿಂಗ್ ಟ್ರಸ್ಟಿಯಾದ ರತ್ನಾಕರ್ ರಾಜು ಅವರೊಂದಿಗೆ 2 ಗಂಟೆಗಳ ಕಾಲ ಸಭೆ ನಡೆಸಿದರು.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ನೆರವಿಗೆ ಸತ್ಯಸಾಯಿ ಟ್ರಸ್ಟ್ ಮೊರೆ ಹೋದ ಅರ್ಜುನ್ ರಣತುಂಗ - arjuna ranatunga appealed to puttaparthi sari sathyasai trust
ಕಂಡರಿಯದ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾದ ನೆರವಿಗೆ ಬರಬೇಕು ಎಂದು ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗ ಸತ್ಯಸಾಯಿ ಟ್ರಸ್ಟ್ನ ಮೊರೆ ಹೋಗಿದ್ದಾರೆ.
ರಣತುಂಗ ಮನವಿ
ಶ್ರೀಲಂಕಾದ ಜನರು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದಾರೆ. ಇದರಿಂದಾಗಿ ಟ್ರಸ್ಟ್ ಉದಾರವಾಗಿ ನಡೆದುಕೊಂಡು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಟ್ರಸ್ಟ್‌ಗೆ ಒತ್ತಾಯಿಸಿದರು. ಔಷಧಿಗಳನ್ನು ಒದಗಿಸಿಕೊಡುವ ಮನವಿಗೆ ಟ್ರಸ್ಟ್ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ರಣತುಂಗ ತಿಳಿಸಿದರು.
ಇದನ್ನೂ ಓದಿ:ಮಹಿಳೆಯರ ಬಳಿಕ ಕಾರ್ಮಿಕರಿಗೂ ಉಚಿತ ಬಸ್ಪಾಸ್ ಸೌಲಭ್ಯ ನೀಡಿದ ಆಪ್ ಸರ್ಕಾರ
Last Updated : May 5, 2022, 12:59 PM IST