ಕರ್ನಾಟಕ

karnataka

ETV Bharat / bharat

ಆರ್ಯನ್​ ಖಾನ್​ ವಿರುದ್ಧ ವಾದಿಸಿದ್ದ ವಕೀಲ ಅದ್ವೈತ್​ ಸೇಠ್ನಾ ರಾಜೀನಾಮೆ - ಪಬ್ಲಿಕ್​ ಪ್ರಾಸಿಕ್ಯೂಟರ್​ ಅದ್ವೈತ್​ ಸೇಠ್ನಾ

ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಬಾಲಿವುಡ್​ ನಟ ಶಾರೂಖ್​ ಖಾನ್​ ಪುತ್ರ ಆರ್ಯನ್​ ಖಾನ್​ ವಿರುದ್ಧ ಕೋರ್ಟ್​ನಲ್ಲಿ ವಾದಿಸಿದ್ದ ವಕೀಲ ಅದ್ವೈತ್​ ಸೇಠ್ನಾ ರಾಜೀನಾಮೆ ನೀಡಿದ್ದಾರೆ.

advocate-advait-sethna-resigned
ಆರ್ಯನ್​ ಖಾನ್​ ವಿರುದ್ಧ ವಾದಿಸಿದ್ದ ವಕೀಲ ಅದ್ವೈತ್​ ಸೇಠ್ನಾ ರಾಜೀನಾಮೆ

By

Published : Aug 25, 2022, 8:48 AM IST

ಮುಂಬೈ:ಕಾರ್ಡೆಲಿಯಾ ಕ್ರೂಜ್ ಡ್ರಗ್ ಪ್ರಕರಣದಲ್ಲಿ ಬಾಲಿವುಡ್​ ನಟ ಶಾರೂಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರ ವಿರುದ್ಧ ನ್ಯಾಯಾಲಯದಲ್ಲಿ ವಾದಿಸಿದ್ದ ಪಬ್ಲಿಕ್​ ಪ್ರಾಸಿಕ್ಯೂಟರ್​ ಅದ್ವೈತ್​ ಸೇಠ್ನಾ ರಾಜೀನಾಮೆ ನೀಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಸೆಷನ್ಸ್​ ನ್ಯಾಯಾಲಯದ ಪಬ್ಲಿಕ್​ ಪ್ರಾಸಿಕ್ಯೂಟರ್​ ಆಗಿ ಎನ್​ಸಿಬಿ ನೇಮಕ ಮಾಡಿತ್ತು. ಡ್ರಗ್ಸ್​ ಪ್ರಕರಣದಲ್ಲಿ ಶಾರೂಖ್​ ಪುತ್ರ ಆರ್ಯನ್​ ಖಾನ್​ ವಿರುದ್ಧ ಕೋರ್ಟ್​ನಲ್ಲಿ ಅದ್ವೈತ್​ ಸೇಠ್ನಾ ವಾದ ಮಂಡನೆ ಮಾಡಿದ್ದರು.

ವಿಚಾರಣೆಯ ಬಳಿಕ ಕೋರ್ಟ್​ ಆರ್ಯನ್​ ಖಾನ್​ಗೆ ಪ್ರಕರಣದಲ್ಲಿ ಕ್ಲೀನ್​​ಚಿಟ್​​ ನೀಡಿ ಖುಲಾಸೆ ಮಾಡಿದೆ. ಇದೀಗ ವಕೀಲರು ಅನಾರೋಗ್ಯ ಕಾರಣ ನೀಡಿ ಪಬ್ಲಿಕ್​ ಪ್ರಾಸಿಕ್ಯೂಟರ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅದ್ವೈತ್ ಸೇಠ್ನಾ ಅವರು ರಾಜೀನಾಮೆಯನ್ನು ಎನ್‌ಸಿಬಿಯ ಹಿರಿಯ ಅಧಿಕಾರಿಗೆ ಹಸ್ತಾಂತರಿಸಿದ್ದು, ಎನ್‌ಸಿಬಿ ಮಹಾನಿರ್ದೇಶಕರು ರಾಜೀನಾಮೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ತಮ್ಮ ಅನಾರೋಗ್ಯದ ಕುರಿತು ವಕೀಲ ಅದ್ವೈತ್ ಸೇಠ್ನಾ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ರಾಜೀನಾಮೆ ಅಂಗೀಕಾರವಾಗುವವರೆಗೆ ಅವರು ಪ್ರಕರಣದ ಭಾಗವಾಗಿ ಮುಂದುವರಿಯಲಿದ್ದಾರೆ.

ಓದಿ:ಸಿಜೆಐ ಎನ್​​​ ವಿ ರಮಣ ನಾಳೆ ನಿವೃತ್ತಿ.. ಎಲ್ಲರ ಮನ ಗೆದ್ದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯವೈಖರಿ

ABOUT THE AUTHOR

...view details