ಜಿಟಿ ಜಿಟಿ ಮಳೆ ಜೊತೆಗೆ ಕೊಂಚ ಚಳಿ. ಮೋಡಗಳ ಕಣ್ಣಾ ಮುಚ್ಚಾಲೆ ಆಟ, ಮನಸಿಗೆ ಹಿತ ನೀಡುವ ತಂಗಾಳಿ, ಹಾಲ್ನೊರೆಯಂತೆ ಹರಿಯುವ ಝರಿಗಳು. ಎಲ್ಲಿ ಕಣ್ಣಾಯಿಸಿದರೂ ಹಚ್ಚ ಹಸಿರು. ದೇವರು ಸೃಷ್ಟಿ ಮಾಡಿರೋ ಪ್ರಕೃತಿ ಸೊಬಗು ಸವಿಯೋದೇ ಒಂದು ಅದ್ಭುತ ಅನುಭವ.
ಮಳೆಗಾಲದಲ್ಲಿ ಅದೆಷ್ಟೋ ಪ್ರದೇಶಗಳು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. ಪ್ರವಾಸಿಗರ ನೆಚ್ಚಿನ ತಾಣ, ಸಾಹಸಿಗಳ ಹಾಟ್‌ಸ್ಪಾಟ್ ಅಂತಾ ಕರೆಸಿಕೊಳ್ಳುವ ಅನೇಕ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಳೆಗಾಲ ಆರಂಭವಾಗಿದೆ. ಜೋರು ಮಳೆಯಿಲ್ಲದಿದ್ದರೂ ತಂಪು ವಾತಾವರಣ ಮನಸ್ಸಿಗೆ ಮುದ ನೀಡುವಂತಿದೆ. ಸುಡು ಬಿಸಿಲಿಗೆ ಸುಸ್ತಾಗಿರುವ ಮಂದಿ ಪ್ರಕೃತಿ ನಡುವೆ ಕೊಂಚ ರಿಲ್ಯಾಕ್ಸ್ ಮಾಡೋಣ ಎಂದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಕೆಲ ಪ್ರವಾಸಿ ತಾಣಗಳ ಬಗ್ಗೆ ಹೇಳ್ತಿವಿ ನೋಡಿ..
ಮುಂಜೋಹ್ ಐಲ್ಯಾಂಡ್ ಹೌಸ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು:ತೆಂಗು, ವೀಳ್ಯದೆಲೆ, ಮಾವು, ಆಲದ ಮರಗಳು ಮತ್ತು ಹಲಸಿನ ಮರಗಳಿಂದ ಸುತ್ತುವರಿದ ರೆಸಾರ್ಟ್ ಅನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಜೊತೆಗೆ ಮೂಲಸೌಕರ್ಯ, ಉತ್ತಮ ಕೊಠಡಿ ವ್ಯವಸ್ಥೆಯಿದ್ದರೆ ಇನ್ನೇನು ಬೇಕು. ಇದು ನೀವು ವಿಹಾರಕ್ಕೆ ಭೇಟಿ ನೀಡಲು ಬಯಸುವ ಸ್ಥಳದಂತೆ ತೋರುತ್ತಿದ್ದರೆ ಮತ್ತಿನ್ನೇಕೆ ಕಾಯುವಿಕೆ. ಮುಂಜೋಹ್ ಐಲ್ಯಾಂಡ್ ಹೌಸ್ಗೆ ಭೇಟಿ ನೀಡಿ, ಆನಂದಿಸಿ.
ಸ್ಟರ್ಲಿಂಗ್, ಊಟಿ:ಊಟಿಯ ಪರ್ವತ ಶಿಖರಗಳ ನಡುವೆ ನೆಲೆಸಿರುವ ಫರ್ನ್ ಹಿಲ್ ದೂರದ ಪೈನ್ ಪ್ರಕೃತಿಯನ್ನು ಕುಳಿತಲ್ಲಿಂದಲೇ ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಇಲ್ಲಿನ ರೆಸಾರ್ಟ್ ಸುತ್ತಲೂ ಗಿಡಮರಗಳು ಆವರಿಸಿದ್ದು ಮನಸ್ಸಿಗೆ ಮುದ ನೀಡುತ್ತವೆ. ಇಲ್ಲಿ ಲೈಬ್ರರಿ, ಆಟವಾಡಲು ವ್ಯವಸ್ಥೆ ಸೇರಿದಂತೆ ನಿಮ್ಮ ದಿನವನ್ನು ನಿಮ್ಮವರೊಂದಿಗೆ ಉತ್ತಮವಾಗಿ ಕಳೆಯಲು ಬೇಕಾಗಿರುವ ವ್ಯವಸ್ಥೆಗಳು ಲಭ್ಯವಿದೆ.