ಭೋಪಾಲ್(ಮಧ್ಯಪ್ರದೇಶ): ಕೇವಲ ಎರಡು ವರ್ಷದವನಾಗಿದ್ದಾಗಲೇ ನಿತ್ಯ 40 ಸಿಗರೇಟ್ ಸೇದುತ್ತಿದ್ದ ಬಾಲಕನೊಬ್ಬ ಇದೀಗ ಸಂಪೂರ್ಣವಾಗಿ ಬದಲಾಗಿದ್ದು, ಆತನ ಗುರುತಿಸುವುದು ಕಷ್ಟವಾಗಿದೆ. ಸಿಗರೇಟ್ ಸೇದುವುದು ಬಿಟ್ಟ ನಂತರ ಸಂಪೂರ್ಣವಾಗಿ ಸ್ಲಿಮ್ ಆಗಿದ್ದು, ಸಂಪೂರ್ಣವಾಗಿ ಆರೋಗ್ಯವಂತನಾಗಿದ್ದಾನೆ.
ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದ ಮಗು ಈಗ ಹೇಗಿದೆ ನೋಡಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ವಾಸವಾಗಿದ್ದ ಎರಡು ವರ್ಷದ ಅರ್ಡಿ ರಿಜಾಲ್ ಚೈನ್ ಸ್ಮೋಕರ್ ಆಗಿ, ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದನು. 2010ರಲ್ಲಿ ಈತ ಸಿಗರೇಟ್ ಸೇದುವ ಅನೇಕ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆದರೆ, 7 ವರ್ಷಗಳ ನಂತರ ಬಾಲಕ ಸಂಪೂರ್ಣವಾಗಿ ಧೂಮಪಾನ ಅಭ್ಯಾಸ ತ್ಯಜಿಸಿದ್ದನು. ಸಿಗರೇಟ್ ಸೇದುತ್ತಿದ್ದ ವೇಳೆ ತುಂಬಾ ದಪ್ಪಗಿದ್ದ ಬಾಲಕ ಇದೀಗ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾನೆ.
ತಂದೆಯಿಂದ ಸಿಗರೇಟ್ ಸೇದುವುದು ಕಲಿತಿದ್ದ ಬಾಲಕ!
ರಿಜಾಲ್ ಕೇವಲ 18 ತಿಂಗಳ ಮಗುವಾಗಿದ್ದ ಸಂದರ್ಭದಲ್ಲಿ ತಂದೆಯಿಂದ ಸಿಗರೇಟ್ ಸೇದುವುದು ಕಲಿತಿದ್ದ ಇಂಡೋನೇಷ್ಯಾದ ಬಾಲಕ ನಿತ್ಯ 40 ಸಿಗರೇಟ್ ಸೇದಲು ಶುರು ಮಾಡಿದ್ದನು. ಈತ ಸಿಗರೇಟ್ ಸೇದುವುದನ್ನ ತಾಯಿ ತಡೆಯಲು ಮುಂದಾದಾಗ ಗೋಡೆಗೆ ತಲೆ ಹೊಡೆದುಕೊಳ್ಳುವುದು ಮಾಡುತ್ತಿದ್ದನು. ಈತ ಸಿಗರೇಟ್ ಸೇದುವ ವಿಷಯ ವೈರಲ್ ಆಗುತ್ತಿದ್ದಂತೆ ಈತನ ಸಹಾಯಕ್ಕೆ ಮುಂದಾಗಿತ್ತು. ಈ ವೇಳೆ, ಧೂಮಪಾನ ಅಭ್ಯಾಸ ಬಿಡಲು ಜಂಕ್ ಫುಡ್ ಸೇವನೆ ಮಾಡಲು ಮುಂದಾಗಿದ್ದನು. ಹೀಗಾಗಿ ಕೇವಲ 5 ವರ್ಷಕ್ಕೆ 22 ಕೆಜಿ ತೂಕದವನಾಗಿದ್ದನು.
ತಂದೆಯಿಂದ ಸಿಗರೇಟ್ ಸೇದುವುದು ಕಲಿತಿದ್ದ ಬಾಲಕ ಇದನ್ನೂ ಓದಿರಿ:ಅತ್ಯಾಚಾರ - ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಚಪ್ಪಲಿ ಎಸೆದ ಅಪರಾಧಿ!
ಈತನ ಮೇಲೆ ವೈದ್ಯರು ಮೇಲಿಂದ ಮೇಲೆ ಮೇಲ್ವಿಚಾರಣೆ ವಹಿಸಿದ್ದರು. ಕಾಲಕ್ರಮೇಣ ಜಂಕ್ ಫುಡ್ ಸೇವನೆ ಕಡಿಮೆ ಮಾಡಿಸಿದ್ದರು. ಇದೀಗ ಆರೋಗ್ಯಕರ ಆಹಾರ ಸೇವನೆ ಮಾಡಲು ಶುರು ಮಾಡಿದ್ದರಿಂದ ಆತನ ದೇಹದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆತ, ಧೂಮಪಾನ ಸೇವನೆ ಬಿಟ್ಟಿರುವುದು ತುಂಬಾ ಕಷ್ಟವಾಗಿತ್ತು. ಆದರೆ, ಧೂಮಪಾನ ಅಭ್ಯಾಸ ಬಿಟ್ಟ ನಂತರ ತುಂಬಾ ಸಂತೋಷವಾಗಿದ್ದೇನೆ ಎಂದು ತಿಳಿಸಿದ್ದಾನೆ.