ಕರ್ನಾಟಕ

karnataka

ETV Bharat / bharat

ಅರ್ಚನಾ ನಾಗ್ ಕೇಸ್: ಇಡಿ ಮುಂದೆ ಹಾಜರಾದ ಶ್ರದ್ಧಾಂಜಲಿ - ಈಟಿವಿ ಭಾರತ ಕನ್ನಡ

ಅರ್ಚನಾ ನಾಗ್ ಪ್ರಕರಣದಲ್ಲಿ ಇಡಿ ಮುಂದೆ ಶ್ರದ್ಧಾಂಜಲಿ ಬೆಹೆರಾ ಹಾಜರಾಗಿದ್ದಾರೆ. ಶ್ರದ್ಧಾಂಜಲಿ ಮತ್ತು ಅಕ್ಷಯ್ ಪರಿಜಾ ಇಬ್ಬರನ್ನೂ ಮುಖಾಮುಖಿ ಕ್ರಾಸ್ ವಿಚಾರಣೆ ಮಾಡುವ ಸಾಧ್ಯತೆ ಇದೆ.

Archana Nag case
ಇಡಿ ಮುಂದೆ ಹಾಜರಾದ ಶ್ರದ್ಧಾಂಜಲಿ

By

Published : Nov 23, 2022, 5:02 PM IST

ಭುವನೇಶ್ವರ(ಒಡಿಶಾ): ಅರ್ಚನಾ ನಾಗ್ ಅವರ ಸಹವರ್ತಿ ಶ್ರದ್ಧಾಂಜಲಿ ಬೆಹೆರಾ ಅವರು ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗೆ ಹಾಜರಾದರು. ಇಡಿಯು ಈ ಹಿಂದೆ ಶ್ರದ್ಧಾಂಜಲಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಅರ್ಚನಾ ನಾಗ್ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಉದ್ಯಮಿ ಅಮಿಯಕಾಂತ್ ದಾಸ್ ಮತ್ತು ಒಡಿಶಾ ಚಲನಚಿತ್ರ ನಿರ್ಮಾಪಕ ಅಕ್ಷಯ್​ ಪರಿಜಾ ಇಡಿ ವಿಚಾರಣೆಗೆ ಹಾಜರಾಗಿದ್ದರು.

ಅಕ್ಷಯ್ ಪರಿಜಾ ನೇಪಲ್ಸ್ ಪೊಲೀಸ್ ಠಾಣೆಯಲ್ಲಿ ಶ್ರದ್ಧಾಂಜಲಿ ಹಣ ಕೇಳಿ ಬ್ಲಾಕ್ ಮೇಲ್ ಮಾಡುತ್ತಿದ್ದುದರ ವಿರುದ್ಧ ಲಿಖಿತ ದೂರು ದಾಖಲಿಸಿದ್ದರು. ಈ ವಿಚಾರವಾಗಿ ಮತ್ತು ಪ್ರಭಾವಿ ವ್ಯಕ್ತಿಗಳಿಂದ ಬ್ಲ್ಯಾಕ್‌ ಮೇಲ್ ಮೂಲಕ ಹಣ ವಸೂಲಿ ಮಾಡುವಲ್ಲಿ ಅರ್ಚನಾ ಜೊತೆ ಭಾಗಿಯಾಗಿರುವ ಆರೋಪದ ಮೇಲೆ ತನಿಖಾಧಿಕಾರಿಗಳು ಶ್ರದ್ಧಾಂಜಲಿ ಅವರಿಗೆ ನೋಟಿಸ್​ ಜಾರಿ ಮಾಡಿದ್ದರು.

ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸಿ ನಂತರ ಪ್ರಭಾವಿ ವ್ಯಕ್ತಿಗಳನ್ನು ಬ್ಲಾಕ್ ಮೇಲ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಎಂದು ಶ್ರದ್ಧಾಂಜಲಿ ದೂರು ನೀಡಿದ್ದರ ಅನ್ವಯ ಅಕ್ಟೋಬರ್ 6 ರಂದು ಖಂಡಗಿರಿ ಪೊಲೀಸರು ಅರ್ಚನಾ ಅವರನ್ನು ಬಂಧಿಸಿದ್ದರು.

ಇದನ್ನೂ ಓದಿ:18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿಗಳಿಗೆ ಹನಿಟ್ರ್ಯಾಪ್: ರಾಜಕೀಯ ಬಿರುಗಾಳಿ ಎಬ್ಬಿಸಿದ ಬ್ಲ್ಯಾಕ್‌ಮೇಲರ್​ ದಂಪತಿ

ABOUT THE AUTHOR

...view details