ಕರೂರು (ತಮಿಳುನಾಡು) :ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಅರವಕುರಿಚಿ ಕ್ಷೇತ್ರದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಅಣ್ಣಾಮಲೈ ಪರ ಬರೆದಿದ್ದ ಗೋಡೆ ಬರಹದಿಂದ ಪ್ರಧಾನಿ ಮೋದಿ ಹೆಸರನ್ನು ಅಳಿಸಿ ಹಾಕಲಾಗಿದೆ.
ಅರವಕುರಿಚಿ ಕ್ಷೇತ್ರದ ಅನೇಕ ಕಡೆ, 'ಭಾರತ್ ಮಾತಾಕಿ ಜೈ, ಕಮಲಕ್ಕೆ ಮತ ನೀಡಿ , ಮೋದಿ ಆಶೀರ್ವದಿತ ಅಭ್ಯರ್ಥಿ ಅಣ್ಣಾಮಲೈ' ಎಂಬ ಘೋಷವಾಕ್ಯಗಳಿಂದ ಕೂಡಿದ ಪ್ರಚಾರ ಗೋಡೆ ಬರಹ ಬರೆಯಲಾಗಿತ್ತು. ಸದ್ಯ, ಗೋಡೆ ಬರದಹದಲ್ಲಿನ ಕೆಲವೊಂದು ವಾಕ್ಯಗಳನ್ನು ಅಳಿಸಲಾಗಿದೆ. ವಿಶೇಷವಾಗಿ 'ಮೋದಿ ಆಶೀರ್ವದಿತ ಅಭ್ಯರ್ಥಿ' ಎಂಬ ವಾಕ್ಯವನ್ನು ಅಳಿಸಿ ಹಾಕಲಾಗಿದೆ. ಅರವಕುರಿಚಿ, ಪಲ್ಲಪಟ್ಟಿ, ಚಿನ್ನಥರಪುರಂ, ಈಸನಾಥಂ ಕರೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ವಾಸಿಸುವ ಸ್ಥಳಗಳಾಗಿವೆ. ಹೀಗಾಗಿ, ವಿರೋಧಗಳು ವ್ಯಕ್ತವಾಗಬಹುದು ಎಂಬ ನಿಟ್ಟಿನಲ್ಲಿ ಗೋಡೆ ಬರಹದ ಸ್ಲೋಗನ್ಗಳನ್ನು ಅಳಿಸಲಾಗಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ : ನಂದಿಗ್ರಾಮದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ - ಜನಸಾಗರದ ವಿಡಿಯೋ ನೋಡಿ