ಹೈದರಾಬಾದ್:ಬ್ಲ್ಯಾಕ್‌ಬೋರ್ಡ್ ರೇಡಿಯೋ ಎಂಬ ಮೊಬೈಲ್ ಅಪ್ಲಿಕೇಶನ್ ಆ್ಯಪ್ ತನ್ನ ಜಾಹೀರಾತಿಗೆ ಶಶಿ ತರೂರ್ ಅವರ ಫೋಟೋವನ್ನು ಬಳಸಿಕೊಂಡಿದೆ. ಅಷ್ಟೇ ಅಲ್ಲದೇ ಅವರು ಹೇಗೆ ಇಂಗ್ಲಿಷ್ ಮಾತನಾಡುತ್ತಾರೋ ಅದೇ ರೀತಿ ಕಲಿಸಿಕೊಡುವುದಾಗಿ ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಶಶಿ ತರೂರ್, ಆ ಆ್ಯಪ್ನ ಜಾಹೀರಾತಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಈ ಆ್ಯಪ್ನಿಂದ ಮೋಸ ಹೋದ ಅನೇಕ ವಿದ್ಯಾರ್ಥಿಗಳು, ಇದನ್ನು ನನ್ನ ಗಮನಕ್ಕೆ ತಂದಿದ್ದಾರೆ. ನಾನು ಎಲ್ಲೂ ಈ ಆ್ಯಪ್ ಬಗ್ಗೆ ಪ್ರಚಾರ ಮಾಡಿಲ್ಲ. ನನ್ನ ಹೆಸರು ಮತ್ತು ಫೋಟೋವನ್ನು ಇಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಓದಿ:ಇಹಲೋಕ ತ್ಯಜಿಸಿದ ಪೋಷಕರು: ತಮ್ಮನಿಗಾಗಿ ಜೀವ ಮುಡಿಪಿಟ್ಟ ಅಕ್ಕ
ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ರಾಜಕೀಯದ ಹೊರತಾಗಿಯೂ ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ. ಅವರು ಬಳಸುವ ಇಂಗ್ಲಿಷ್ ಪದಗಳು ಸಾಮಾನ್ಯ ಜನರಿಗೆ ಅರ್ಥ ಆಗುವುದಿಲ್ಲ. ಅವರು ಬಳಸುವ ಪದಗಳ ಅರ್ಥವನ್ನು ಹುಡುಕಲು ಅನೇಕರು ನಿಘಂಟನ್ನು ಕೂಡ ಉಪಯೋಗಿಸುತ್ತಾರೆ.