ಕರ್ನಾಟಕ

karnataka

ETV Bharat / bharat

ಕ್ಷಮೆ ಕೇಳಿ, ಇಲ್ಲವೇ ಅಯೋಧ್ಯೆ ಪ್ರವೇಶಿಸಲು ಬಿಡುವುದಿಲ್ಲ: ರಾಜ್ ಠಾಕ್ರೆಗೆ ಬಿಜೆಪಿ ಸಂಸದ ಎಚ್ಚರಿಕೆ - ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿಕೆ

ಉತ್ತರ ಭಾರತೀಯರನ್ನು ಅವಮಾನಿಸುವ ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ ಅವರನ್ನು ಅಯೋಧ್ಯೆಯ ಗಡಿ ಪ್ರವೇಶಿಸಲು ಬಿಡುವುದಿಲ್ಲ ಎಂದು ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.

Raj Thackeray, Brij Bhushan Sharan Singh
ರಾಜ್ ಠಾಕ್ರೆ ಹಾಗೂ ಬ್ರಿಜ್ ಭೂಷಣ್ ಶರಣ್ ಸಿಂಗ್

By

Published : May 6, 2022, 2:29 PM IST

ನವದೆಹಲಿ:ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಗುರುವಾರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಜೂನ್ 5ರಂದು ಅಯೋಧ್ಯೆಗೆ ಭೇಟಿ ನೀಡುವುದನ್ನು ವಿರೋಧಿಸಿದ್ದಾರೆ ಮತ್ತು ಉತ್ತರ ಭಾರತೀಯರನ್ನು ಅವಮಾನಿಸಿದ್ದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸುವವರೆಗೆ ಅವರನ್ನು ನಗರಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ಧಾರೆ.


ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದ ಮತ್ತು ರಾಮಮಂದಿರ ಚಳವಳಿಯ ನಾಯಕರಲ್ಲಿ ಒಬ್ಬರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಈ ಕುರಿತು ಟ್ವೀಟ್‌ ಮಾಡಿದ್ದು, ಉತ್ತರ ಭಾರತೀಯರನ್ನು ಅವಮಾನಿಸುವ ರಾಜ್ ಠಾಕ್ರೆ ಅವರನ್ನು ಅಯೋಧ್ಯೆಯ ಗಡಿಯನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅಯೋಧ್ಯೆಗೆ ಬರುವ ಮೊದಲು, ರಾಜ್ ಠಾಕ್ರೆ ಎಲ್ಲಾ ಉತ್ತರ ಭಾರತೀಯರಲ್ಲಿ ಕೈಮುಗಿದು ಕ್ಷಮೆಯಾಚಿಸಬೇಕು. ಆಯೋಧ್ಯೆ ಚಳವಳಿಯಲ್ಲಿ ಠಾಕ್ರೆ ಕುಟುಂಬದ ಕೊಡುಗೆ ಏನೂ ಇಲ್ಲ ಎಂದು ಹೇಳಿದ್ದಾರೆ. ಉತ್ತರ ಭಾರತೀಯರ ಕ್ಷಮೆ ಕೇಳುವವರೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಠಾಕ್ರೆ ಅವರನ್ನು ಭೇಟಿ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಶ್ರೀರಾಮನ ಆಶೀರ್ವಾದ ಪಡೆಯಲು ಜೂನ್ 5 ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ಠಾಕ್ರೆ ಅವರು ಏ.17 ರಂದು ಪುಣೆಯಲ್ಲಿ ಘೋಷಿಸಿದ್ದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅಯೋಧ್ಯೆ ಚಳವಳಿಗೆ ಆರ್‌ಎಸ್‌ಎಸ್‌ ಕಾರ್ಯಕರ್ತರ ಕೊಡುಗೆ ಏನು?, ಚಳವಳಿಗೆ ಎಷ್ಟು ಮಂದಿ ಕಾರ್ಯಕರ್ತರು ಪ್ರಾಣ ತ್ಯಾಗ ಮಾಡಿದ್ದಾರೆ?, ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ನ ಕಾರಣದಿಂದಾಗಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:'ಮಸೀದಿಗಳ ಎದುರು ಹನುಮಾನ್​ ಚಾಲೀಸಾ ಪಠಣ ಮುಂದುವರೆಯಲಿದೆ': ರಾಜ್​ ಠಾಕ್ರೆ

ABOUT THE AUTHOR

...view details