ಕರ್ನಾಟಕ

karnataka

ETV Bharat / bharat

ಮನುಷ್ಯತ್ವ ಇರಬೇಕಲ್ವೇ.. ಸೋಂಕಿತರಿರುವ ಮನೆ ಲಾಕ್​ ಮಾಡಿ ಅಮಾನವೀಯತೆ ಪ್ರದರ್ಶಿಸಿದ ಅಪಾರ್ಟ್​​ಮೆಂಟ್ ಜನ.. - nelore city

ನಿನ್ನೆ ರಾತ್ರಿ ಸೋಂಕಿತ ದಂಪತಿಗೆ ಔಷಧಿ ಬೇಕಾಗಿತ್ತು. ಆ ಸಮಯದಲ್ಲಿ ಯಾರೂ ಲಭ್ಯವಾಗಿಲ್ಲ. ಹಾಗಾಗಿ, ಪತಿ ಹೊರಗೆ ಹೋಗಿ ಔಷಧಿಗಳನ್ನು ತಂದಿದ್ದಾರೆ. ಇದನ್ನು ನೋಡಿದ ಅಪಾರ್ಟ್​​ಮೆಂಟ್ ಜನತೆಗೆ ಸೋಂಕು ತಗುಲುವ ಆತಂಕ ಎದುರಾಗಿದೆ. ಹಾಗಾಗಿ, ಇಂದು ಬೆಳಗ್ಗೆ ಸೋಂಕಿತರಿರುವ ಮನೆಯ ಬಾಗಿಲನ್ನು ಲಾಕ್ ಮಾಡಿದ್ದಾರೆ..

Apartment people locked the corona victims flat who were in home isolation
ಸೋಂಕಿತರಿರುವ ಮನೆಯನ್ನು ಲಾಕ್​ ಮಾಡಿ ಅಮಾನವೀಯತೆ ಪ್ರದರ್ಶಿಸಿದ ಅಪಾರ್ಟ್​​ಮೆಂಟ್ ಜನತೆ!​

By

Published : Apr 20, 2021, 7:50 PM IST

ಆಂಧ್ರಪ್ರದೇಶ: ಅಪಾರ್ಟ್​​ಮೆಂಟ್​ ಜನರು ಸೋಂಕಿತರೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಘಟನೆ ನೆಲೋರ್ ನಗರದಲ್ಲಿ ನಡೆದಿದೆ. ಸೋಂಕಿತರಿರುವ ಮನೆಯನ್ನು ಲಾಕ್​ ಮಾಡಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

ಸೋಂಕಿತರಿರುವ ಮನೆಯನ್ನು ಲಾಕ್​ ಮಾಡಿ ಅಮಾನವೀಯತೆ ಪ್ರದರ್ಶಿಸಿದ ಅಪಾರ್ಟ್​​ಮೆಂಟ್ ಜನತೆ!​

10 ದಿನದ ಹಿಂದೆ ಈ ಅಪಾರ್ಟ್​​ಮೆಂಟ್​ನಲ್ಲಿರುವ ದಂಪತಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ತಮಗೆ ಬೇಕಾದ ಔಷಧಿ ಮತ್ತು ಇತರೆ ಅಗತ್ಯ ವಸ್ತುಗಳನ್ನು ತಮ್ಮ ಸಂಬಂಧಿಕರ ಸಹಾಯದಿಂದ ತರಿಸಿಕೊಳ್ಳುತ್ತಿದ್ದರು. ನಿನ್ನೆ ರಾತ್ರಿ ಅವರಿಗೆ ಔಷಧಿ ಬೇಕಾಗಿದ್ದು, ಆ ಸಮಯದಲ್ಲಿ ಯಾರೂ ಲಭ್ಯವಾಗಿಲ್ಲ. ಹಾಗಾಗಿ, ಪತಿ ಹೊರಗೆ ಹೋಗಿ ಔಷಧಿಗಳನ್ನು ತಂದಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲೂ ಲಾಕ್​ಡೌನ್?​: ನಾಳೆ ಹೊರಬೀಳಲಿದೆ ಮಹತ್ವದ ನಿರ್ಧಾರ!

ಇದನ್ನು ನೋಡಿದ ಅಪಾರ್ಟ್​​ಮೆಂಟ್ ಜನತೆಗೆ ಸೋಂಕು ತಗುಲುವ ಆತಂಕ ಎದುರಾಗಿದೆ. ಹಾಗಾಗಿ, ಇಂದು ಬೆಳಗ್ಗೆ ಸೋಂಕಿತರಿರುವ ಮನೆಯ ಬಾಗಿಲನ್ನು ಲಾಕ್ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ಆ ಕೂಡಲೇ ಮನೆಗೆ ಹೋಗಿ ಬೀಗ ತೆಗೆದಿದ್ದಾರೆ.

ABOUT THE AUTHOR

...view details