ಪ್ರಕಾಶಂ(ಆಂಧ್ರಪ್ರದೇಶ): 42 ವರ್ಷದ ಮಹಿಳೆಯೊಬ್ಬಳ ಮೇಲೆ ಮಂತ್ರವಾದಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆಂಬ ಆರೋಪದ ಮೇಲೆ ಆತನನ್ನ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂನಲ್ಲಿ ನಡೆದಿದೆ.
42 ವರ್ಷದ ಮಹಿಳೆ ವಿಜಯಲಕ್ಷ್ಮಿ ಮೇಲೆ 51 ವರ್ಷದ ಓಬಯ್ಯ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿತ್ತು. ಈ ಆಕ್ರೋಶದಲ್ಲೇ ಆತನ ಮೆಲೆ ಹಲ್ಲೆ ಮಾಡಿರುವ ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ. ಈ ವೇಳೆ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಜಿಯಾ ಸುಲ್ತಾನ್ ಬೇಗಂ ಅವರನ್ನ ತಡೆಯಲು ಯತ್ನಿಸಿದ್ರೂ, ವಿಫಲವಾಗಿದ್ದಾರೆ.
ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಉಪ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್, ಕಂದಕೂರು ಡಿಎಸ್ಪಿ ಶ್ರೀನಿವಾಸನ್ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದರು.