ಕರ್ನಾಟಕ

karnataka

ETV Bharat / bharat

ಅಕ್ರಮ ಸಾಗಣೆ: ಹಣ ಸೇರಿದಂತೆ 5 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ವಶ - ಕರ್ನೂಲ್​ನಲ್ಲಿ ಅಕ್ರಮ ಹಣ ಸಾಗಾಣಿಕೆ

AP Police seizes gold, cash.. ಆಂಧ್ರಪ್ರದೇಶ ಎಸ್​ಇಬಿ ಅಧಿಕಾರಿಗಳು ಕರ್ನೂಲ್ ಜಿಲ್ಲೆಯ ಪಂಚಲಿಂಗಲಾ ಚೆಕ್ ಪೋಸ್ಟ್‌ನಲ್ಲಿ ಎಂದಿನಂತೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಖಾಸಗಿ ಬಸ್‌ನಲ್ಲಿ ಒಟ್ಟು 8 ಕೆಜಿ 250 ಗ್ರಾಂ ಚಿನ್ನ, 28.5 ಕೆಜಿ ಬೆಳ್ಳಿ ಮತ್ತು ರೂ. 90 ಲಕ್ಷ ನಗದು ಕಂಡುಬಂದಿದೆ.

ಅಕ್ರಮ ಸಾಗಣೆ: ಹಣ ಸೇರಿದಂತೆ 5 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ವಶ
ಅಕ್ರಮ ಸಾಗಣೆ: ಹಣ ಸೇರಿದಂತೆ 5 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ವಶ

By

Published : Mar 6, 2022, 3:16 PM IST

ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಂಚಲಿಂಗಲಾ ಚೆಕ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ ಮತ್ತು ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಎಸ್​ಇಬಿ ಅಧಿಕಾರಿಗಳು ಕರ್ನೂಲ್ ಜಿಲ್ಲೆಯ ಪಂಚಲಿಂಗಲಾ ಚೆಕ್ ಪೋಸ್ಟ್‌ನಲ್ಲಿ ಎಂದಿನಂತೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಖಾಸಗಿ ಬಸ್‌ನಲ್ಲಿ ಒಟ್ಟು 8 ಕೆಜಿ 250 ಗ್ರಾಂ ಚಿನ್ನ, 28.5 ಕೆಜಿ ಬೆಳ್ಳಿ ಮತ್ತು ರೂ. 90 ಲಕ್ಷ ನಗದು ಕಂಡುಬಂದಿದೆ. ಇದನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು ಇಡೀ ವಿಶ್ವಕ್ಕೆ ಪರಿಣಾಮ ಬೀರಲಿದೆ, ಭಾರತ-ರಷ್ಯಾ ಸಂಬಂಧವೂ ಇದಕ್ಕೆ ಹೊರತಲ್ಲ: ರಷ್ಯಾ

ಯಾರ ಗಮನಕ್ಕೂ ಬಾರದಂತೆ ವಿಶೇಷವಾಗಿ ತಯಾರಿಸಿದ ಉಡುಪಿನಲ್ಲಿ ಈ ಚಿನ್ನವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗ್ತಿದೆ. ಆದರೂ ಎಸ್‌ಇಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಾಗಿದೆ.

ABOUT THE AUTHOR

...view details