ಹೈದರಾಬಾದ್ : ಎಪಿ ಮಹೇಶ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್‌ನಿಂದ ಫಿಶಿಂಗ್ ಮೇಲ್ ಮೂಲಕ ಹ್ಯಾಕರ್‌ಗಳು ಬ್ಯಾಂಕ್‌ನ ವ್ಯವಸ್ಥೆಗೆ ಪ್ರವೇಶಿಸಿ 12.48 ಕೋಟಿ ರೂಪಾಯಿ ಲಪಟಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ನೈಜೀರಿಯನ್ನರು ಸೇರಿದಂತೆ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಎಪಿ ಮಹೇಶ್ ಬ್ಯಾಂಕ್ ಹ್ಯಾಕಿಂಗ್ ಪ್ರಕರಣ ಜನವರಿ 24 ರಂದು ಕೆಲವು ಅಪರಿಚಿತ ಹ್ಯಾಕರ್‌ಗಳು ನಾಲ್ಕು ಖಾತೆಗಳಲ್ಲಿನ ಬ್ಯಾಲೆನ್ಸ್ ಅನ್ನು ಬದಲಾಯಿಸಿದ್ದಲ್ಲದೇ ಆ ಹಣವನ್ನು ಭಾರತದಾದ್ಯಂತ 115 ವಿವಿಧ ಖಾತೆಗಳಿಗೆ ವರ್ಗಾಯಿಸುವ ಮೂಲಕ ದರೋಡೆ ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 23 ಜನರನ್ನು ಬಂಧಿಸಿ ತನಿಖೆ ಮುನ್ನಡೆಸಿದ್ದಾರೆ.
ಓದಿ:ಘಟಿಕೋತ್ಸವದ ಸಂಭ್ರಮದಲ್ಲಿ ವಿವಿ ಎಡವಟ್ಟು.. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗೆ ಅಗೌರವ!
ನವೆಂಬರ್ 2021 ರಲ್ಲಿ ಬ್ಯಾಂಕಿನ ಉದ್ಯೋಗಿಗಳಿಗೆ ಕಳುಹಿಸಲಾದ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಹೊಂದಿರುವ ಫಿಶಿಂಗ್ ಮೇಲ್‌ಗಳ ಮೂಲಕ ಹ್ಯಾಕರ್‌ಗಳು ಎಪಿ ಮಹೇಶ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್‌ನ ವ್ಯವಸ್ಥೆಯನ್ನು ಪ್ರವೇಶಿಸಿದ್ದಾರೆ ಎಂದು ಸೈಬರ್ ಫೋರೆನ್ಸಿಕ್ಸ್ ತೀರ್ಮಾನಿಸಿದೆ ಅಂತಾ ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ. ಆನಂದ್ ಹೇಳಿದರು.
ಮೇಲ್‌ಗಳನ್ನು ತೆರೆದು ಕ್ಲಿಕ್ ಮಾಡಿದ ನಂತರ RAT ಬ್ಯಾಂಕಿನ ಕಂಪ್ಯೂಟರ್‌ನಲ್ಲಿ ಎಂಬೆಡ್ ಆಗಿದೆ. RAT ಸಾಫ್ಟ್‌ವೇರ್ ಮೂಲಕ ಹ್ಯಾಕರ್‌ಗಳು ಬ್ಯಾಂಕ್‌ನ ಕಂಪ್ಯೂಟರ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಬ್ಯಾಂಕಿನಲ್ಲಿನ ಎಲ್ಲ ವ್ಯವಸ್ಥೆಗಳು ಪರಸ್ಪರ ಸಂಪರ್ಕ ಹೊಂದಿರುವುದರಿಂದ ಹ್ಯಾಕರ್‌ಗಳು ಬ್ಯಾಂಕಿನ ಕೋರ್ ಬ್ಯಾಂಕಿಂಗ್ ಸರ್ವರ್ ಅನ್ನು ರಿಮೋಟ್‌ನಿಂದ ಪ್ರವೇಶಿಸಲು ಸಮರ್ಥರಾಗಿದ್ದರು ಮತ್ತು ಈ ವರ್ಷದ ಜನವರಿಯಲ್ಲಿ ಅವರು ನಾಲ್ಕು ಖಾತೆಗಳಲ್ಲಿನ ಮೊತ್ತವನ್ನು ಬದಲಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಪಿ ಮಹೇಶ್ ಬ್ಯಾಂಕ್ ಹ್ಯಾಕಿಂಗ್ ಪ್ರಕರಣ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಾಲ್ಕು ಖಾತೆಗಳಿಂದ RTGS/NEFT ವಹಿವಾಟುಗಳನ್ನು ಮಾಡಿದ್ದಾರೆ. ಆ ವಹಿವಾಟದ ಮೊತ್ತವನ್ನು 115 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಬಳಿಕ ಮತ್ತೆ ಆ ಖಾತೆಗಳಿಂದ 398 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹೆಚ್ಚಿನ ಫಲಾನುಭವಿ ಖಾತೆಗಳು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ಏಳು ಈಶಾನ್ಯ ರಾಜ್ಯಗಳಲ್ಲಿವೆ ಮತ್ತು ನಂತರ ಭಾರತದಾದ್ಯಂತ 938 ಎಟಿಎಂಗಳಿಂದ ಹಣವನ್ನು ಹಿಂಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ಕ್ರೈಂ ಪೊಲೀಸರು 2,08,55,536 ರೂ.ಗಳನ್ನು ಎಟಿಎಂಗಳಿಂದ ಹಿಂತೆಗೆದುಕೊಳ್ಳುವ ಮೊದಲು 1,08,48,990 ರೂ.ಗಳನ್ನು ಮರುಪಾವತಿಸಿದ್ದಾರೆ. ಅದನ್ನು ಎಪಿ ಮಹೇಶ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್‌ಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ:ಆಂಧ್ರದ ಶ್ರೀಶೈಲಂನಲ್ಲಿ ಕನ್ನಡಿಗರು, ಸ್ಥಳೀಯರ ನಡುವೆ ಘರ್ಷಣೆ: ವಾಹನಗಳು, ಅಂಗಡಿಗಳಿಗೆ ಹಾನಿ
ತನಿಖೆಯ ಭಾಗವಾಗಿ, ಶಂಕಿತರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ದೇಶದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ನಾಲ್ಕು ಬ್ಯಾಂಕ್ ಖಾತೆಗಳ ಇಂಟರ್ನೆಟ್ ಬ್ಯಾಂಕಿಂಗ್‌ಗಾಗಿ ಐಪಿ ಲಾಗ್‌ಗಳನ್ನು ಪಡೆಯಲಾಗಿದೆ. ಐಪಿ ವಿಳಾಸಗಳು ಯುಎಸ್‌ಎ, ಕೆನಡಾ, ರೊಮೇನಿಯಾವನ್ನು ಸೂಚಿಸುತ್ತಿವೆ. ಹ್ಯಾಕರ್‌ಗಳು ಬಿಹಾರ ಮೂಲದ ಕಂಪನಿಯ ವಿಪಿಎನ್ ಸೇವೆಗಳನ್ನು ಬಳಸಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ, ಇಂದು ಒಬ್ಬ ನೈಜೀರಿಯನ್ನ ಪ್ರಜೆ ಸೇರಿದಂತೆ ನಾಲ್ವರು ನೈಜೀರಿಯನ್ನರು ಬಂಧಿಸಲಾಗಿದೆ. ನಾಲ್ಕು ನೈಜೀರಿಯನ್ನ ಪ್ರಜೆ ಸೇರಿದಂತೆ ಇದುವರೆಗೆ ಒಟ್ಟು 23 ಜನರನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ. ಈ ಪ್ರಕರಣದ ಪ್ರಮುಖ ಕಿಂಗ್‌ಪಿನ್‌ಗಳು ಭಾರತದ ಹೊರಗೆ ಅಂದ್ರೆ ಹೆಚ್ಚಾಗಿ ಯುಕೆ ಮತ್ತು ನೈಜೀರಿಯಾದಲ್ಲಿ ನೆಲೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಇದುವರೆಗೆ 58 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಆನಂದ್ ಮಾಹಿತಿ ನೀಡಿದರು.