ಕರ್ನಾಟಕ

karnataka

ETV Bharat / bharat

ಆಂಧ್ರಪ್ರದೇಶ ಹೈಕೋರ್ಟ್​ನಿಂದ ಸಿಎಂ ಜಗನ್​​ ಮೋಹನ್​ ರೆಡ್ಡಿ ಸರ್ಕಾರಕ್ಕೆ ನೋಟಿಸ್ - conempt-notice-to-state-government

ಮಧ್ಯಾಹ್ನ 12 ಗಂಟೆಗೆ ವೈದ್ಯಕೀಯ ವರದಿ ನೀಡುವಂತೆ ಆದೇಶಿಸಲಾಯಿತು. ಆದರೆ, ಸಂಜೆ 6 ಗಂಟೆಯಾದರೂ ಏಕೆ ನೀಡಲಿಲ್ಲ ಎಂದು ಹೈಕೋರ್ಟ್​ ಪ್ರಶ್ನಿಸಿತು. ಹಿಂದಿನ ರಾತ್ರಿ 11 ಗಂಟೆಗೆ ಆದೇಶದ ಪ್ರತಿಯನ್ನು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದ ತಿರಸ್ಕಾರದ ಅಡಿಯಲ್ಲಿ ಸರ್ಕಾರಕ್ಕೆ ನೋಟಿಸ್ ನೀಡುವಂತೆ ಹಾಗೂ ಸ್ಟೇಷನ್ ಹೌಸ್ ಅಧಿಕಾರಿ, ಸಿಐಡಿ ಹೆಚ್ಚುವರಿ ಡಿಜಿಗೆ ನೋಟಿಸ್ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹೈಕೋರ್ಟ್
ಹೈಕೋರ್ಟ್

By

Published : May 19, 2021, 8:51 PM IST

ಆಂಧ್ರಪ್ರದೇಶ: ಸಂಸದ ರಘುರಾಮ್ ಕೃಷ್ಣರಾಜ ಬಂಧನ ಪ್ರಕರಣದಲ್ಲಿ ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಹೈಕೋರ್ಟ್ ಗರಂ ಆಗಿದೆ.

ಗುಂಟೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ಇಲ್ಲಿನ ರಾಜ್ಯ ಸರ್ಕಾರ ಸಲ್ಲಿಸಿದ್ದ ಲಂಚ್​ ಮೋಷನ್​​ ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ಇಂದು ಆಲಿಸಿತು. ಈ ಸಂಬಂಧ ಆಂಧ್ರದ ನರಸಾಪುರಂ ಸಂಸದ ರಘುರಾಮ ಕೃಷ್ಣರಾಜ ಅವರಿಗೆ ಸಂಬಂಧಿಸಿದಂತೆ ನೀಡಿದ್ದ ಆದೇಶಗಳನ್ನು ಏಕೆ ಪಾಲಿಸಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಮ್ಯಾಜಿಸ್ಟ್ರೇಟ್ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ಸರ್ಕಾರದ ಲಂಚ್​ ಮೋಷನ್​ ಅರ್ಜಿಯ ವಿಚಾರಣೆ ಸಂಬಂಧ ಈ ಹಿಂದೆ ಗುಂಟೂರು ಆರನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಆದೇಶಗಳನ್ನು ಏಕೆ ಜಾರಿಗೆ ತರಲಿಲ್ಲ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಮಧ್ಯಾಹ್ನ 12 ಗಂಟೆಗೆ ವೈದ್ಯಕೀಯ ವರದಿ ನೀಡುವಂತೆ ಆದೇಶಿಸಲಾಯಿತು. ಆದರೆ, ಸಂಜೆ 6 ಗಂಟೆಯಾದರೂ ಏಕೆ ನೀಡಲಿಲ್ಲ ಎಂದು ಕೋರ್ಟ್​ ಪ್ರಶ್ನಿಸಿತು. ಹಿಂದಿನ ರಾತ್ರಿ 11 ಗಂಟೆಗೆ ಆದೇಶದ ಪ್ರತಿಯನ್ನು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದ ತಿರಸ್ಕಾರದ ಅಡಿಯಲ್ಲಿ ಸರ್ಕಾರಕ್ಕೆ ನೋಟಿಸ್ ನೀಡುವಂತೆ ಹಾಗೂ ಸ್ಟೇಷನ್ ಹೌಸ್ ಅಧಿಕಾರಿ, ಸಿಐಡಿ ಹೆಚ್ಚುವರಿ ಡಿಜಿಗೆ ನೋಟಿಸ್ ಕಳಿಸುವಂತೆ ಹೈಕೋರ್ಟ್ ನಿರ್ದೇಶನೆ ನೀಡಿದೆ.

ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಾಗ ನ್ಯಾಯಾಲಯಗಳು ಪ್ರತಿಕ್ರಿಯಿಸುತ್ತವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ABOUT THE AUTHOR

...view details