ಕರ್ನಾಟಕ

karnataka

ETV Bharat / bharat

ಮಾರ್ಗದರ್ಶಿ ಶಾಖೆಗಳ ಖಾತೆ ಡಿಫ್ರೀಜ್ ಪ್ರಶ್ನಿಸಿ ಆಂಧ್ರ ಸರ್ಕಾರ, ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್​ - AP High Court bench

Margadarsi case: ಮಾರ್ಗದರ್ಶಿ ಚಿಟ್​ ಫಂಡ್​ ಕಂಪನಿಯ ಮೂರು ಶಾಖೆಗಳ ಬ್ಯಾಂಕ್​ ಖಾತೆಗಳ ಕಾರ್ಯ ನಿರ್ವಹಿಸಲು ಅನುಮತಿ ನೀಡಿದ್ದರ ವಿರುದ್ಧ ಆಂಧ್ರ ಪ್ರದೇಶದ ಸರ್ಕಾರ ಮತ್ತು ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಹೈಕೋರ್ಟ್​ ವಜಾ ಮಾಡಿದೆ.

Margadarsi chit fund
ಮಾರ್ಗದರ್ಶಿ ಚಿಟ್​ ಫಂಡ್​

By ETV Bharat Karnataka Team

Published : Oct 21, 2023, 1:37 PM IST

ಅಮರಾವತಿ (ಆಂಧ್ರಪ್ರದೇಶ): ಮಾರ್ಗದರ್ಶಿ ಚಿಟ್​ ಫಂಡ್​ ಕಂಪನಿಯ ಮೂರು ಶಾಖೆಗಳ ಬ್ಯಾಂಕ್​ ಖಾತೆಗಳ ಕಾರ್ಯ ನಿರ್ವಹಿಸಲು (ಡಿಫ್ರೀಜ್) ಅನುಮತಿ ನೀಡಿದ್ದ ಆದೇಶದ ವಿರುದ್ಧ ಆಂಧ್ರ ಪ್ರದೇಶದ ಸರ್ಕಾರ ಮತ್ತು ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಆಂಧ್ರಪ್ರದೇಶ ಹೈಕೋರ್ಟ್​ ವಜಾಗೊಳಿಸಿದೆ.

ಆಂಧ್ರದ ಪ್ರದೇಶದ ಚಿರಾಲ, ವಿಶಾಖಪಟ್ಟಣಂ ಮತ್ತು ಸೀತಂಪೇಟಾದಲ್ಲಿರುವ ಮಾರ್ಗದರ್ಶಿ ಚಿಟ್ ಫಂಡ್‌ನ ಮೂರು ಶಾಖೆಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದಕ್ಕಾಗಿ ರಾಜ್ಯ ಪೊಲೀಸರು ಪ್ರತ್ಯೇಕವಾಗಿ ಮೂರು ನೋಟಿಸ್‌ಗಳನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ಶಾಖೆಗಳ ಮ್ಯಾನೇಜರ್​ಗಳು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​ ಏಕಸದಸ್ಯ ಪೀಠವು, ಎಲ್ಲ ನೋಟಿಸ್‌ಗಳನ್ನು ಅಮಾನತುಗೊಳಿಸಿ ಗುರುವಾರ ಆದೇಶಿಸಿತ್ತು.

ಚಿಟ್​​ ಫಂಡ್ ಗ್ರಾಹಕರ ಅನುಕೂಲಕ್ಕಾಗಿ ಮಾರ್ಗದರ್ಶಿ ಶಾಖೆಯ ವ್ಯವಸ್ಥಾಪಕರು ನಿರ್ವಹಿಸುವ ಖಾತೆಗಳನ್ನು ಡಿಫ್ರೀಜ್ ಮಾಡಲು ಆಯಾ ಬ್ಯಾಂಕ್​ ಮ್ಯಾನೇಜರ್‌ಗಳಿಗೆ ಸೂಚಿಸಿ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಸುಬ್ಬಾರೆಡ್ಡಿ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮತ್ತು ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಸರ್ಕಾರದ ಮತ್ತು ಪೊಲೀಸರ ಮೇಲ್ಮನವಿಗಳನ್ನು ನಿರ್ವಹಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಯು.ದುರ್ಗಾಪ್ರಸಾದ ರಾವ್ ಮತ್ತು ಎ.ವಿ.ರವೀಂದ್ರ ಬಾಬು ಅವರನ್ನೊಳಗೊಂಡ ಪೀಠ ಶುಕ್ರವಾರ ಈ ಆದೇಶ ಹೊರಡಿಸಿದೆ.

ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದಲ್ಲಿ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳು ನೀಡಿರುವ ಮಧ್ಯಂತರ ಆದೇಶಗಳ ಬಗ್ಗೆ ಕ್ರಿಮಿನಲ್ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಏಕಸದಸ್ಯ ಪೀಠದ ನ್ಯಾಯಮೂರ್ತಿಗಳ ಮುಂದೆ ಈ ಪ್ರಕರಣಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರ ಮತ್ತು ಪೊಲೀಸರಿಗೆ ಸೂಚನೆ ನೀಡಿತು.

ಇದನ್ನೂ ಓದಿ:ಮಾರ್ಗದರ್ಶಿ ಚಿಟ್‌ಫಂಡ್‌ ಶಾಖೆಗಳಿಗೆ ನೀಡಿದ್ದ ಆಂಧ್ರ ಪೊಲೀಸರ ಎಲ್ಲ ನೋಟಿಸ್‌ಗಳನ್ನು ಅಮಾನತುಗೊಳಿಸಿದ ಹೈಕೋರ್ಟ್

ABOUT THE AUTHOR

...view details