ಕರ್ನಾಟಕ

karnataka

ETV Bharat / bharat

ಹೊಸ ಪಿಂಚಣಿ ಯೋಜನೆ ಪ್ರಸ್ತಾಪಿಸಿದ ಎಪಿ ಸರ್ಕಾರ... ತಿರುಗಿ ಬಿದ್ದ ನೌಕರರ ಸಂಘಗಳು! - ಪಿಂಚಣಿ ಯೋಜನೆ

ಆಂಧ್ರಪ್ರದೇಶದಲ್ಲಿ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ನೌಕರರ ಪ್ರತಿಭಟನೆ ಕಾವು ಜೋರಾಗಿದೆ. ಪಿಂಚಣಿ ಯೋಜನೆ ಸಂಬಂಧ ಜಗನ್​ ಸರ್ಕಾರದ ವಿರುದ್ಧ ನೌಕರರ ಸಂಘಗಳು ತಿರುಗಿಬಿದ್ದಿವೆ.

AP government plan to introduce Guaranteed Pension Scheme, GPS opposed by protesting employees in Andhra Pradesh, Pension Scheme, Pension Scheme news, ಗ್ಯಾರಂಟಿಡ್​ ಪಿಂಚಣಿ ಯೋಜನೆಯನ್ನು ಪರಿಚಯಿಸಲು ಮುಂದಾದ ಎಪಿ ಸರ್ಕಾರ, ಆಂಧ್ರಪ್ರದೇಶದಲ್ಲಿ ಪ್ರತಿಭಟನಾನಿರತ ನೌಕರರಿಂದ ಜಿಪಿಎಸ್ ವಿರೋಧ, ಪಿಂಚಣಿ ಯೋಜನೆ, ಪಿಂಚಣಿ ಯೋಜನೆ ಸುದ್ದಿ,
ಜಗನ್​ ಆಡಳಿತ ವಿರುದ್ಧ ತಿರುಗಿ ಬಿದ್ದ ನೌಕರರ ಸಂಘಗಳು!

By

Published : Apr 26, 2022, 1:18 PM IST

ಅಮರಾವತಿ(ಆಂಧ್ರಪ್ರದೇಶ):ಅಸ್ತಿತ್ವದಲ್ಲಿರುವ ಕಾಂಟ್ರಿಬ್ಯೂಟರಿ ಪಿಂಚಣಿ ಯೋಜನೆ (ಸಿಪಿಎಸ್) ವಿರೋಧದ ನಡುವೆ ಆಂಧ್ರ ಪ್ರದೇಶ ಸರ್ಕಾರವು ಸೋಮವಾರ ಗ್ಯಾರಂಟಿಡ್​ ಪಿಂಚಣಿ ಯೋಜನೆ (ಜಿಪಿಎಸ್) ತರುವ ಹೊಸ ಪ್ರಸ್ತಾವನೆ ಬಳಿಕ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಸಿಪಿಎಸ್ ಅನ್ನು ರದ್ದುಗೊಳಿಸುವುದಾಗಿ ಚುನಾವಣೆಯ ಮೊದಲು ವಿರೋಧ ಪಕ್ಷದ ನಾಯಕರಾಗಿದ್ದಾಗ ಜಗನ್ ಜನರಿಗೆ ಭರವಸೆ ನೀಡಿದ್ದರು. ಸಿಎಂ ನೀಡಿದ್ದ ಭರವಸೆಯನ್ನು ಕಾಪಾಡಿಕೊಳ್ಳುಬೇಕೆಂಬ ಆಗ್ರಹ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಂಘಗಳಿಂದ ಹೆಚ್ಚುತ್ತಿತ್ತು. ಅವರ ಬೇಡಿಕೆಯಂತೆ ಸರ್ಕಾರವು ಸಿಪಿಎಸ್, ಓಲ್ಡ್​ ಪಿಂಚಣಿ ನೀತಿ (ಒಪಿಎಸ್)ಯನ್ನು ಮಧ್ಯಮ ಹಂತವಾಗಿ ಸರ್ಕಾರ ತಂದಿದೆ. ಸಿಪಿಎಸ್ ಅ​ನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆಯನ್ನು ಮುಂದುವರಿಸುವಂತೆ ನೌಕರರ ಸಂಘ ಆಗ್ರಹ ಮತ್ತಷ್ಟು ಹೆಚ್ಚಾಗಿ ತೊಡಗಿದೆ.

ಇನ್ನು ಸಿಪಿಎಸ್ ಅನ್ನು ಪರಿಶೀಲಿಸಲು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತವು ಮೂರು ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಆರು ಸದಸ್ಯರ ಹೊಸ ಸಮಿತಿಯನ್ನು ರಚಿಸಿತ್ತು. ಸರ್ಕಾರವು ಜಂಟಿ ಸ್ಟಾಫ್ ಕೌನ್ಸಿಲ್​ನ ಸಭೆ ನಡೆಸಿ CPS ಅನ್ನು ತೆಗೆದುಹಾಕುವ ಬದಲು GPS ಅನ್ನು ಪ್ರಸ್ತಾಪಿಸಿತು. ಆದರೆ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಸಂಘಗಳು ಈ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ತಮ್ಮ ಪ್ರತಿಭಟನೆ ಹೆಚ್ಚಿಸಿತು.

ಓದಿ:ಶಾಸಕರು ಎಷ್ಟು ಬಾರಿ ಗೆದ್ದರೂ ಒಂದೇ ಅವಧಿಗೆ ಪಿಂಚಣಿ: ಪಂಜಾಬ್‌ ಸಿಎಂ ಮಹತ್ವದ ನಿರ್ಧಾರ

ಇದನ್ನು ಒಪ್ಪದ ನೌಕರರ ಸಂಘಗಳು ಜಿಪಿಎಸ್ ಅನ್ನು ವಿರೋಧಿಸುತ್ತಿದ್ದು, ಸಿಪಿಎಸ್ ಅನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಗೆ ಹಿಂತಿರುಗಿಬೇಕು ಎಂದು ಪಟ್ಟು ಹಿಡಿದಿದೆ. ತಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ನೌಕರರ ಸಂಘ ಹೇಳಿದೆ. ಈ ಗೊಂದಲದಿಂದಾಗಿ ಎಲ್ಲ ಸಂಘಗಳೊಂದಿಗೆ ಮುಂದಿನ 10 ದಿನಗಳಲ್ಲಿ ಮತ್ತೊಂದು ಸಭೆ ಕರೆಯುವುದಾಗಿ ಸರ್ಕಾರ ಹೇಳಿದೆ.

ಜಿಪಿಎಸ್ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಎಪಿ ನಾನ್ ಗೆಜೆಟೆಡ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ ಶ್ರೀನಿವಾಸ ರಾವ್, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ನಾವು ಒತ್ತಾಯಿಸಿದ್ದೇವೆ. ಸರ್ಕಾರವು ಸಿಪಿಎಸ್ ರದ್ದುಗೊಳಿಸಲು ಒಪ್ಪಿಲ್ಲ. ಆದರೆ, ಹೊಸ ಜಿಪಿಎಸ್ ಜಾರಿಗೊಳಿಸಲು ಬಯಸಿದೆ. ಆದರೆ, ನಮಗೆ ಹಳೆಯ ಪಿಂಚಣಿ ಯೋಜನೆ ಮಾತ್ರ ಬೇಕು ಎಂದು ನಾವು ಸ್ಪಷ್ಟಪಡಿಸಿದ್ದೇವೆ ಅಂತಾ ಸರ್ಕಾರಿ ಅಧಿಕಾರಿಗಳೊಂದಿಗಿನ ಸಭೆಯ ನಂತರ ಅವರು ತಿಳಿಸಿದರು.

ಸಿಪಿಎಸ್ ರದ್ದುಪಡಿಸುವ ತಮ್ಮ ಬೇಡಿಕೆಯನ್ನು ಬೆಂಬಲಿಸಿ ‘ಚಲೋ ವಿಜಯವಾಡ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಆಂದೋಲನದಲ್ಲಿ ಭಾಗಿಯಾಗುವ ಶಿಕ್ಷಕರ ಮೇಲೆ ಸರ್ಕಾರ ಸೋಮವಾರ ತೀವ್ರವಾಗಿ ಕಡಿವಾಣ ಹಾಕಿತ್ತು. 'ಚಲೋ ವಿಜಯವಾಡ' ಕಾರ್ಯಕ್ರಮದ ಮೊದಲು ಆಂದೋಲನದ ಸಂಘಗಳಿಗೆ ಸಂಯೋಜಿತವಾಗಿರುವ ಶಿಕ್ಷಕರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಲಾಯಿತು. ಇನ್ನು ವಿಜಯವಾಡ ತಲುಪಿದ ಕೆಲವು ಶಿಕ್ಷಕರು ಮತ್ತು ಶಿಕ್ಷಕರ ಸಂಘದ ಮುಖಂಡರನ್ನು ನಗರಕ್ಕೆ ಪ್ರವೇಶಿಸಿದ ನಂತರ ಪೊಲೀಸರು ವಶಕ್ಕೆ ಪಡೆದರು.

ಓದಿ:ಪಿಂಚಣಿದಾರರ ವಾರ್ಷಿಕ ಭೌತಿಕ ಪರಿಶೀಲನೆ : ಈವರೆಗೆ 3.15 ಲಕ್ಷ ಅನರ್ಹ ಫಲಾನುಭವಿಗಳ ಪಿಂಚಣಿ ಸ್ಥಗಿತ!

ವಿಜಯವಾಡ ನಗರ ಮತ್ತು ಪಕ್ಕದ ತಾಡೆಪಲ್ಲಿ ಪುರಸಭೆಯು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ರಾಜ್ಯದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವಿಭಾಗವಾದ OCTOPUS ಅನ್ನು ನಿಯೋಜಿಸಿತ್ತು.

ಮುಖ್ಯಮಂತ್ರಿ ನಿವಾಸಕ್ಕೆ ತೆರಳುವ ವಿಜಯವಾಡ ಮತ್ತು ತಾಡೆಪಲ್ಲಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮುಳ್ಳುತಂತಿ ಬೇಲಿ ಹಾಕಿದ್ದರು. ಪೊಲೀಸರು ಬಸ್‌ಗಳಲ್ಲಿ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ಕನಕದುರ್ಗಮ್ಮ ವಾರದಿ ಬಳಿ ತಡೆದು ಬ್ಯಾಗ್​ಗಳನ್ನು ತಪಾಸಣೆ ನಡೆಸಿದರು.

For All Latest Updates

ABOUT THE AUTHOR

...view details