ಕರ್ನಾಟಕ

karnataka

ETV Bharat / bharat

ಆಂಧ್ರಪ್ರದೇಶದಲ್ಲಿ ವಿದ್ಯುತ್​ ಅಭಾವ: 'ಪವರ್​ ಹಾಲಿಡೇ' ಘೋಷಿಸಿದ ಸರ್ಕಾರ

ಆಂಧ್ರ ಪ್ರದೇಶಕ್ಕೆ ಅಗತ್ಯವಾದ ವಿದ್ಯುತ್​ನಲ್ಲಿ ದಿನಕ್ಕೆ 40ರಿಂದ 50 ಮಿಲಿಯನ್​ ಯೂನಿಟ್​ಗಳ ಕೊರತೆ ಉಂಟಾಗಿದೆ. ಅಗತ್ಯವಾದಷ್ಟು ವಿದ್ಯುತ್​ ಸಿಗುತ್ತಿಲ್ಲ. 15 ದಿನಗಳಲ್ಲಿ ವಿದ್ಯುತ್​ ಸಮಸ್ಯೆ ಪರಿಹಾರ ಆಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ವಿದ್ಯುತ್​ ಅಭಾವ
ಆಂಧ್ರಪ್ರದೇಶದಲ್ಲಿ ವಿದ್ಯುತ್​ ಅಭಾವ

By

Published : Apr 8, 2022, 5:40 PM IST

Updated : Apr 8, 2022, 5:47 PM IST

ಅಮರಾವತಿ (ಆಂಧ್ರಪ್ರದೇಶ): ನೆರೆಯ ಆಂಧ್ರಪ್ರದೇಶದಲ್ಲಿ ವಿದ್ಯುತ್​ ಅಭಾವ ಎದುರಾಗಿದೆ. ಇದರಿಂದ ಗುರುವಾರ ಮಧ್ಯರಾತ್ರಿಯಿಂದಲೇ (ಏ.8ರಿಂದ 22ರವರೆಗೆ) 'ವಿದ್ಯುತ್‌​ ರಜೆ'ಗಳನ್ನು ಸರ್ಕಾರ ಘೋಷಿಸಿದೆ. ಇದರಿಂದ ಪ್ರತಿವಾರದ ಜತೆಗೆ ಹೆಚ್ಚುವರಿ ಒಂದು ರಜೆಯನ್ನು ಕೈಗಾರಿಕೆಗಳು ನೀಡಬೇಕು. ದಿನದ 24 ಗಂಟೆಯ ವಿದ್ಯುತ್​ ಬಳಕೆಯಲ್ಲಿ ಶೇ.50ರಷ್ಟು ವಿದ್ಯುತ್​ ಮಾತ್ರವೇ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಆಂಧ್ರ ಪ್ರದೇಶ ರಾಜ್ಯಕ್ಕೆ ಅಗತ್ಯವಾದ ವಿದ್ಯುತ್​ನಲ್ಲಿ ದಿನಕ್ಕೆ 40ರಿಂದ 50 ಮಿಲಿಯನ್​ ಯೂನಿಟ್​ಗಳ ಕೊರತೆ ಉಂಟಾಗಿದೆ. ಅಗತ್ಯವಾದಷ್ಟು ವಿದ್ಯುತ್​ ಸಿಗುತ್ತಿಲ್ಲ. ಲಭ್ಯ ವಿದ್ಯುತ್​ನಲ್ಲಿ ಗೃಹ ಬಳಕೆ ಮತ್ತು ಕೃಷಿ ಹಾಗೂ ಶಾಲಾ-ಕಾಲೇಜುಗಳ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗಾಗಿ ಒದಗಿಸಬೇಕಿದೆ. ಹೀಗಾಗಿ 'ವಿದ್ಯುತ್‌​ ರಜೆ'ಗಳನ್ನು ಘೋಷಿಸದೇ ಯಾವುದೇ ಆಯ್ಕೆ ಸರ್ಕಾರದ ಮುಂದಿರಲಿಲ್ಲ. 15 ದಿನಗಳಲ್ಲಿ ವಿದ್ಯುತ್​ ಸಮಸ್ಯೆ ಪರಿಹಾರ ಆಗುವ ನಿರೀಕ್ಷೆ ಇದೆ ಎಂದು ಆಂಧ್ರ ಪ್ರದೇಶದ ವಿದ್ಯುತ್​ ವಿತರಣಾ ಕಂಪನಿಯ ಮುಖ್ಯಸ್ಥ ಜೆ.ಪದ್ಮ ಜನಾರ್ಧನರೆಡ್ಡಿ ಹೇಳಿದ್ದಾರೆ.

ಕೈಗಾರಿಕೆಗಳಿಗೆ ದೊಡ್ಡ ಹೊಡೆತ:ಕೊರೊನಾ ಹಾವಳಿಯಿಂದ ನಲುಗಿರುವ ಕೈಗಾರಿಕೆಗಳಿಗೆ 'ಪವರ್​ ರಜೆ'ಗಳು ದೊಡ್ಡ ಹೊಡೆತವನ್ನೇ ಕೊಟ್ಟಿವೆ. ಅಲ್ಲದೇ, 2014ರ ನಂತರ ವಿದ್ಯುತ್​ ಅಭಾವದ ಪರಿಸ್ಥಿತಿ ಮತ್ತೆ ಎದುರಾಗಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳಲಿದೆ. ಅಲ್ಲದೇ, ಇರುವ ಕಾರ್ಮಿಕರು ಸಹ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಯನ್ನು ತಂದೊಡ್ಡಿದೆ ಎಂದು ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 'ಪವರ್​ ರಜೆ'ಯ ನಿಯಮಗಳು ಹೀಗಿವೆ..

  • ಕೈಗಾರಿಕೆಗಳು ಕಡ್ಡಾಯವಾಗಿ ವಾರಾಂತ್ಯದ ರಜೆಯೊಂದಿಗೆ ಮತ್ತೊಂದು ದಿನ ರಜೆ ಘೋಷಿಸಬೇಕು.
  • ಪ್ರತಿ ಸಂಜೆ 6 ಗಂಟೆ ನಂತರ ಕೇವಲ ಪಾಳಿಯಲ್ಲಿ ಕೆಲಸ ಮಾತ್ರ ಮಾಡಿಸಬೇಕು.
  • ದಿನದ 24 ಗಂಟೆಯ ವಿದ್ಯುತ್​ ಬಳಕೆಯಲ್ಲಿ ಶೇ.50ರಷ್ಟು ವಿದ್ಯುತ್​ ಮಾತ್ರವೇ ಬಳಕೆ ಮಾಡಬೇಕು.
  • ಸರ್ಕಾರಿ, ಖಾಸಗಿ ಕಚೇರಿಗಳು, ಶಾಂಪಿಂಗ್​ ಮಾಲ್​ಗಳಲ್ಲಿ ಎಸಿ ಬಳಕೆಯನ್ನು ಅರ್ಧದಷ್ಟು ತಗ್ಗಿಸಬೇಕು.
  • ವಿದ್ಯುತ್​ ಅವಲಂಬಿತ ಜಾಹೀರಾತು ಫಲಕಗಳನ್ನು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಬಳಕೆ ಮಾಡಬಾರದು.
Last Updated : Apr 8, 2022, 5:47 PM IST

ABOUT THE AUTHOR

...view details