ಗುಂಟೂರು (ಆಂಧ್ರಪ್ರದೇಶ):ಗುಂಟೂರು ಜಿಲ್ಲೆಯ ಯುವ ಕಲಾವಿದನಿಂದ ಪ್ರಭಾವಿತರಾದ ನಟ ಸೋನು ಸೂದ್, ಒಂದು ದಿನ ಈ ಯುವ ಪ್ರತಿಭೆಗಳನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಬಾಯೊಳಗೆ ಕುಂಚವಿರಿಸಿ ಸೋನು ಸೂದ್ ಚಿತ್ರ ಬಿಡಿಸಿದ ಯುವಕ.. ಒಮ್ಮೆ ಭೇಟಿಯಾಗೋಣ ಎಂದ ನಟ.. - ನಟ ಸೋನು ಸೂದ್
ತನ್ನ ಚಿತ್ರವನ್ನು ಬಾಯಿಯಿಂದ ಚಿತ್ರಿಸಿದ ಯುವ ಪ್ರತಿಭೆಯನ್ನು ಭೇಟಿಯಾಗಲು ಬಯಸುತ್ತೇನೆ ಎಂದು ನಟ ಸೋನು ಸೂದ್ ಹೇಳಿದ್ದಾರೆ..
ಗುಂಟೂರು ಜಿಲ್ಲೆಯ ತೆನಾಲಿಯ ವಿದ್ಯಾರ್ಥಿ ದಸರಿ ಯಶ್ವಂತ್, ಸೋನು ಸೂದ್ ಚಿತ್ರವನ್ನು ಬಾಯಯಲ್ಲಿ ಕುಂಚವಿರಿಸಿ ಚಿತ್ರಿಸಿದ್ದು, ನಂತರ ನಟನನ್ನು ಟ್ಯಾಗ್ ಮಾಡುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದರಿಂದ ಪ್ರಭಾವಿತರಾದ ಸೂದ್, "ಒಂದು ದಿನ ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸೋನು ಸೂದ್ ತಮ್ಮ ಮಾನವೀಯ ಸೇವೆಯಿಂದ ಎಲ್ಲರ ಪ್ರಶಂಸೆ ಗಳಿಸುತ್ತಿದ್ದಾರೆ. ನಟನಿಂದ ಪ್ರೇರಿತರಾಗಿ, ಮೂರನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಯಶ್ವಂತ್ ತಮ್ಮ ಅಜ್ಜನ ಹೆಸರಿನಲ್ಲಿ ದಸರಿ ನಂಚರಯ್ಯ ಚಾರಿಟೇಬಲ್ ಟ್ರಸ್ಟ್ ಕೂಡ ಸ್ಥಾಪಿಸಿದ್ದಾರೆ.