ಕರ್ನಾಟಕ

karnataka

ETV Bharat / bharat

ರಾಹುಲ್​ ಗಾಂಧಿ ವಿರುದ್ಧ ಕೇಂದ್ರ ಸಚಿವರ ವಾಗ್ದಾಳಿ: ಮಿಸ್ಟರ್ ಫೇಕ್ ಗಾಂಧಿ ಎಂದು ಪ್ರಹ್ಲಾದ್​ ​ಜೋಶಿ ಟ್ವೀಟ್ - ರಾಹುಲ್ ಗಾಂಧಿ ಅಮೆರಿಕ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕರಿಂದ ಪ್ರಶಂಸೆ ಪಡೆದಿರುವುದಕ್ಕೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹತಾಶರಾಗಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದಾರೆ.

Anurag Thakur,  Pralhad Joshi slams Rahul Gandhi
ರಾಹುಲ್​ ಗಾಂಧಿ ವಿರುದ್ಧ ಕೇಂದ್ರ ಸಚಿವರ ವಾಗ್ದಾಳಿ: ಮಿಸ್ಟರ್ ಫೇಕ್ ಗಾಂಧಿ ಎಂದು ಪ್ರಲ್ಹಾದ್​ ಜೋಷಿ ಟ್ವೀಟ್

By

Published : May 31, 2023, 4:20 PM IST

ನವದೆಹಲಿ:ವಿದೇಶ ಪ್ರವಾಸದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತವನ್ನು ಅವಮಾನಿಸುತ್ತಾರೆ ಎಂದು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಪ್ರಹ್ಲಾದ್​​ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕರಿಂದ ಪ್ರಶಂಸೆ ಪಡೆದಿರುವುದಕ್ಕೆ ರಾಹುಲ್ ಗಾಂಧಿ ಹತಾಶರಾಗಿದ್ದಾರೆ ಎಂದು ಠಾಕೂರ್ ಆರೋಪಿಸಿದ್ದಾರೆ.

ಅಮೆರಿಕದ ಪ್ರವಾಸದಲ್ಲಿ ರಾಹುಲ್​ ಗಾಂಧಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಅನಿವಾಸಿ ಭಾರತೀಯರ (ಎನ್‌ಆರ್‌ಐ) ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಎಲ್ಲವನ್ನೂ ತಿಳಿದವರಲ್ಲಿ ಒಬ್ಬರು ಎಂದು ಟೀಕೆ ಮಾಡಿದ್ದಾರೆ. ಈ ಬಗ್ಗೆ ಪ್ರಕ್ರಿಯಿಸಿರುವ ಅನುರಾಗ್ ಠಾಕೂರ್, ರಾಹುಲ್ ಗಾಂಧಿ ತಮ್ಮ ವಿದೇಶಿ ಭೇಟಿಗಳ ಸಮಯದಲ್ಲಿ ಭಾರತವನ್ನು ಅವಮಾನಿಸುತ್ತಾರೆ. ಅವರ ಪ್ರಸ್ತುತ ವಿದೇಶ ಪ್ರವಾಸವು ಅದೇ ದಿಕ್ಕಿನಲ್ಲಿದೆ. ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸುವ ಉದ್ದೇಶ ಹೊಂದಿದ್ದಾರೆ. ಆದರೆ, ದೇಶವನ್ನು ಅವಮಾನಿಸುವ ಮೂಲಕ ಕೊನೆಗೊಳ್ಳುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲದೇ, ಈ ಹಿಂದೆಯೂ ರಾಹುಲ್ ಗಾಂಧಿ ಭಾರತವನ್ನು ಒಂದು ದೇಶವೆಂದು ಪರಿಗಣಿಸುವುದಿಲ್ಲ. ಅದು ರಾಜ್ಯಗಳ ಒಕ್ಕೂಟ ಎಂದು ನಂಬಿರುವುದನ್ನು ನಾವು ನೋಡಿದ್ದೇವೆ. ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಾಗಲೆಲ್ಲಾ ಭಾರತ ಮತ್ತು ದೇಶವಾಸಿಗಳ ಬಗ್ಗೆಯೇ ಪ್ರಶ್ನೆಗಳನ್ನು ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಸ್ ಎಂದು ಕರೆದಿದ್ದರು. ರಾಹುಲ್ ಗಾಂಧಿಗೆ ಈ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕುಟುಕಿದ್ದಾರೆ.

ಇದನ್ನೂ ಓದಿ:ಇವರು ದೇವರಿಗೇ ಪಾಠ ಹೇಳಬಲ್ಲರು: ಪ್ರಧಾನಿ ಮೋದಿ ವಿರುದ್ಧ ರಾಹುಲ್ ವ್ಯಂಗ್ಯ

ಪ್ರಧಾನಿ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಇಟಲಿ ಪ್ರಧಾನಿ ಹೇಳಿದ್ದಾರೆ. ಬೇರೆ ದೇಶದ ಪ್ರಧಾನಿಯೊಬ್ಬರು ಪ್ರಧಾನಿ ಮೋದಿಯ ಪಾದಗಳನ್ನು ಮುಟ್ಟುವ ಮೂಲಕ ಸ್ವಾಗತಿಸಿದರು, ಇದು ಕಳೆದ 75 ವರ್ಷಗಳಲ್ಲಿ ಎಂದಿಗೂ ಸಂಭವಿಸಿಲ್ಲ. ಇದನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೂ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ. ಮತ್ತೊಬ್ಬ, ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಟ್ವೀಟ್​ ಮಾಡಿ ರಾಹುಲ್​ ಗಾಂಧಿ ಅವರನ್ನು ನಕಲಿ ಗಾಂಧಿ ಎಂದು ಕರೆದಿದ್ದಾರೆ.

''ನೋ ಮಿಸ್ಟರ್ ಫೇಕ್ ಗಾಂಧಿ! ಭಾರತದ ತಿರುಳೇ ಅದರ ಸಂಸ್ಕೃತಿ. ದೇಶಕ್ಕೆ ಕಳಂಕ ತರಲು ವಿದೇಶಿ ಮಣ್ಣನ್ನು ಬಳಸುವ ನಿಮ್ಮಂತವರಲ್ಲದೇ ಭಾರತೀಯರು ತಮ್ಮ ಇತಿಹಾಸದ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ ಮತ್ತು ತಮ್ಮ ಭೌಗೋಳಿಕತೆಯನ್ನು ಚೆನ್ನಾಗಿ ರಕ್ಷಿಸಿಕೊಳ್ಳುತ್ತಾರೆ. ಏನೂ ಅರಿಯದವರು ಇದ್ದಕ್ಕಿದ್ದಂತೆ ಎಲ್ಲದರಲ್ಲೂ ಪರಿಣಿತನಾಗುವುದು ತಮಾಷೆಯಾಗಿದೆ'' ಎಂದು ಪ್ರಹ್ಲಾದ್​​ ಜೋಶಿ ಟ್ವೀಟ್​ ಮಾಡಿ ಕಿಡಿಕಾರಿದ್ದಾರೆ.

ರಾಹುಲ್​ ಹೇಳಿದ್ದೇನು?: ರಾಹುಲ್​ ಗಾಂಧಿ ತಮ್ಮ ಸ್ಯಾನ್ ಫ್ರಾನ್ಸಿಸ್ಕೋ ಭಾಷಣದಲ್ಲಿ ಪ್ರಧಾನಿ ಮೋದಿ ಅವರನ್ನು ದೇವರೊಂದಿಗೆ ಕುಳಿತುಕೊಳ್ಳುವಂತೆ ಮಾಡಿದರೆ, ಅವರು ಬ್ರಹ್ಮಾಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ದೇವರಿಗೆ ವಿವರಿಸಲು ಪ್ರಾರಂಭಿಸುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಕೆಲ ಜನರು ತಾವು ದೇವರಿಗಿಂತ ಹೆಚ್ಚಿನವರು ಎಂದು ಸಂಪೂರ್ಣವಾಗಿ ನಂಬಿಕೊಂಡಿದ್ದಾರೆ. ಮೋದಿ ಕೂಡ ಅಂತಹ ಒಂದು ಮಾದರಿ ಎಂದು ರಾಹುಲ್ ಟೀಕಿಸಿದ್ದರು.

ಇದೇ ವೇಳೆ ಭಾರತದಾದ್ಯಂತ ವ್ಯಾಪಕವಾಗಿ ಹರಡಿರುವ ಇಸ್ಲಾಮೋಫೋಬಿಯಾ (ಇಸ್ಲಾಂ ಅಥವಾ ಮುಸ್ಲಿಮರ ವಿರೋಧಿ) ಹೇಗೆ ಪರಿಹರಿಸಲು ಅವರು ಯೋಜಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭಾರತದಲ್ಲಿ ಇದು ನಿಯತಕಾಲಿಕವಾಗಿ ನಡೆಯುತ್ತದೆ. 80ರ ದಶಕದಲ್ಲಿ ದಲಿತ ಸಮುದಾಯಕ್ಕೆ ಏನು ಸಂಭವಿಸಿತ್ತು. ಅದೇ ಇಂದು ಮುಸ್ಲಿಂ ಸಮುದಾಯಕ್ಕೆ ಆಗುತ್ತಿದೆ. 80ರ ದಶಕದಲ್ಲಿ ಉತ್ತರ ಪ್ರದೇಶಕ್ಕೆ ಇದು ತಿಳಿಯುತ್ತದೆ. ನಾವು ಇದನ್ನು ಎದುರಿಸಬೇಕು ಮತ್ತು ಇದರ ವಿರುದ್ಧ ಹೋರಾಡಬೇಕಾಗಿದೆ. ಇದು ದ್ವೇಷದಿಂದ ಅಲ್ಲ ಪ್ರೀತಿಯಿಂದ ಹೋರಾಡಬೇಕು. ಇದಕ್ಕೆ ನನಗೆ ಉತ್ತಮ ಮಾರ್ಗವೆಂದರೆ "ನಫ್ರತ್ ಕೆ ಬಜಾರ್ ಮೇ.. ಮೊಹಬ್ಬತ್ ಕಿ ದುಖಾನ್" ಎಂದು ರಾಹುಲ್ ಹೇಳಿದ್ದರು.

ಇದನ್ನೂ ಓದಿ:ಬಿಜೆಪಿಯಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ, ಜನರಿಗೆ ಬೆದರಿಕೆ: ಅಮೆರಿಕದಲ್ಲಿ ರಾಹುಲ್ ಗಾಂಧಿ

ABOUT THE AUTHOR

...view details