ಚೆನ್ನೈ(ತಮಿಳುನಾಡು): ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿರುವ ಚೆನ್ನೈ ಪೊಲೀಸರು ಪುರಾತನ ಹಿಂದೂ ದೇವತೆಗಳ ವಿಗ್ರಹಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ನಟರಾಜ, ಶಿವ ಮತ್ತು ವಿಷ್ಣುವಿನ ವಿಗ್ರಹಗಳು ಸೇರಿವೆ. ಪಾಂಡಿಚೇರಿಯ ಸಫ್ರೆನ್ ರಸ್ತೆಯಲ್ಲಿ ವಿಗ್ರಹಗಳು ದೊರೆತಿದೆ.
ಈ ಎಲ್ಲ ವಿಗ್ರಹಗಳು ಪುದುಚೇರಿಯ ಜೋಸೆಫ್ ಕೊಲಂಬಾನಿ ಎಂಬುವವರ ವಶದಲ್ಲಿದ್ದವು. ಆದರೆ, ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಖಚಿತ ದಾಖಲೆ ಇರಲಿಲ್ಲ. ಸುಮಾರು 600 ವರ್ಷಗಳಷ್ಟು ಹಳೆಯದಾದ ವಿಗ್ರಹಗಳು ಇವಾಗಿವೆ ಎಂದು ಹೇಳಲಾಗ್ತಿದ್ದು, ಹಿಂದೂ ದೇವಾಲಯಗಳಿಂದ ಕಳ್ಳತನ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.