ಕರ್ನಾಟಕ

karnataka

ETV Bharat / bharat

Antilia explosives case: ಆರೋಪಿಗಳಿಗೆ ಚಾರ್ಜ್​ಶೀಟ್​ ನಕಲು ನೀಡಲು ಎನ್​ಐಎ ನಕಾರ! - ಆರೋಪಿಗಳಿಗೆ ಚಾರ್ಜ್​ಶೀಟ್​ ಒದಗಿಸಲು ತುಂಬಾ ಹಣ ವೆಚ್ಚ

Antilia explosives case ಮತ್ತು ಮನ್ಸುಖ್ ಹಿರೇನ್ ಅನುಮಾನಾಸ್ಪದ ಸಾವಿನ ಪ್ರಕರಣದ ಆರೋಪಿಗಳ ವಿರುದ್ಧ ಸಲ್ಲಿಸಲಾದ ಚಾರ್ಜ್​ಶೀಟ್ ಅನ್ನು ಆರೋಪಿಗಳಿಗೆ ನೀಡಲಾಗುವುದಿಲ್ಲ ಅಂತಾ ಎನ್​ಐಎ ನ್ಯಾಯಾಲಯಕ್ಕೆ ತಿಳಿಸಿದೆ.

Antilia explosives case, charge sheet copy to accused, charge sheet copy to accused is quite expensive, National Investigation Agency,  ರಾಷ್ಟ್ರೀಯ ತನಿಖಾ ತಂಡ, ಚಾರ್ಜ್​ಶೀಟ್​ನ್ನು ಆರೋಪಿಗಳಿಗೆ ನೀಡಲಾಗುವುದಿಲ್ಲ, ಆರೋಪಿಗಳಿಗೆ ಚಾರ್ಜ್​ಶೀಟ್​ ಒದಗಿಸಲು ತುಂಬಾ ಹಣ ವೆಚ್ಚ, ಆಂಟಿಲಿಯಾ ಸ್ಫೋಟಕ ಪ್ರಕರಣ,
ಆರೋಪಿಗಳಿಗೆ ಚಾರ್ಜ್​ಶೀಟ್​ ನಕಲು ನೀಡಲು ಎನ್​ಐಎ ನಕಾರ

By

Published : Aug 5, 2022, 8:13 AM IST

Updated : Aug 5, 2022, 9:00 AM IST

ಮುಂಬೈ, ಮಹಾರಾಷ್ಟ್ರ:Antilia explosives case ಮತ್ತು ಮನ್ಸುಖ್ ಹಿರೇನ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ ಶೀಟ್ ಅನ್ನು ಆರೋಪಿಗಳಿಗೆ ನೀಡಲಾಗುವುದಿಲ್ಲ ಎಂದು ಎನ್​ಐಎ ಸ್ಪಷ್ಟ ಪಡಿಸಿದೆ. ಚಾರ್ಜ್​ಶೀಟ್ ನಕಲು ಪ್ರತಿ ನೀಡಲು ನಮಗೆ 40 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಸುಮಾರು 8 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ಬಾಂಬೆ ಸೆಷನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಲಯಕ್ಕೆ ಎನ್​ಐಎ ಹೇಳಿದೆ.

ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಗಳಿಗೆ ಚಾರ್ಜ್​ಶೀಟ್​ ಒದಗಿಸಲು ತುಂಬಾ ಹಣ ವೆಚ್ಚವಾಗಲಿದೆ (ಸುಮಾರು 40 ಲಕ್ಷ). ಈ ವೆಚ್ಚ ಕೈಗೆಟುಕುವಂತಿಲ್ಲ. ಇದಲ್ಲದೇ ಈ ಪ್ರತಿಗಳು ಆರೋಪಿಗಳಿಗೆ ಲಭ್ಯವಾಗಲು 258 ದಿನಗಳು ಅಂದರೆ 8 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು NIA ಹೇಳಿಕೊಂಡಿದೆ.

ಮುಂಬೈ ಮತ್ತು ಥಾಣೆಯಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ದೃಶ್ಯಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಡಿಜಿಟಲ್ ಪುರಾವೆಗಳನ್ನು ಸಾಕ್ಷ್ಯವು ಒಳಗೊಂಡಿದೆ. ತಮ್ಮ ಬಳಿ ಫೋನ್ ದಾಖಲೆಗಳು ಮತ್ತು ಅವರ ಸಂಭಾಷಣೆಗಳ ಲಕ್ಷಾಂತರ ಪ್ರತಿಗಳಿವೆ. ಈ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್​ಐಎ ಹೇಳಿದೆ.

ರಾಷ್ಟ್ರೀಯ ತನಿಖಾ ತಂಡವು ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝೆ, ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಮತ್ತು ಇತರ ಹತ್ತು ಮಂದಿ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಚಾರ್ಜ್ ಶೀಟ್‌ಗಳಲ್ಲಿ ಇನ್ನೂರು ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿದೆ ಮತ್ತು 164 ಸಾಕ್ಷಿಗಳ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಕೊರೊನಾ ಹಿನ್ನೆಲೆ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಲು 30 ದಿನಗಳ ಕಾಲಾವಕಾಶ ಕೇಳಿತ್ತು. ಈ ಅವಧಿ ಮುಗಿಯುವ ಎರಡು ದಿನಗಳ ಮೊದಲು ಎನ್‌ಐಎ ಸುಮಾರು 10 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು ಎಂದು ಎನ್​ಐಎ ಹೇಳಿದೆ.

ಆಂಟಿಲಿಯಾ ಸ್ಫೋಟಕ ಪ್ರಕರಣದಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಸ್ಕಾರ್ಪಿಯೋ ಸ್ಫೋಟಕ ಪ್ರಕರಣ, ಸ್ಕಾರ್ಪಿಯೋ ಕಾರು ಕಳ್ಳತನ ಮತ್ತು ಮನ್ಸುಖ್ ಹಿರಾನ್ ಸಾವಿನ ಆರೋಪಗಳಿಗೆ ಸಂಬಂಧಿಸಿದೆ. ಕೊಲೆ, ಪಿತೂರಿ, ಅಪಹರಣ, ಬೆದರಿಕೆ, ಸಾಮಾಜಿಕ ಶಾಂತಿ ಭಂಗ ಇತ್ಯಾದಿಗಳಿಗೆ ಎನ್‌ಐಎ ಹೊಣೆಯಾಗಿದೆ. ಐಪಿಸಿ ಸೆಕ್ಷನ್ 120 ಬಿ, 201, 286, 302, 364, 384, 386, 403, 419, 506 ಇತ್ಯಾದಿ ಸೆಕ್ಷನ್‌ಗಳ ಅಡಿ ಆರೋಪಗಳನ್ನು ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ತಂಡ ನ್ಯಾಯಾಲಯಕ್ಕೆ ಹೇಳಿದೆ.

ಕಳೆದ ವರ್ಷ 2021ರಲ್ಲಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಹೊರಗೆ ಸ್ಕಾರ್ಪಿಯೋ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರ ಪತ್ತೆಯಾಗಿತ್ತು. ಈ ವಾಹನವು ಥಾಣೆಯ ಉದ್ಯಮಿ ಮನ್ಸುಖ್ ಹಿರಾನ್ ಅವರ ಮಾಲೀಕತ್ವದಲ್ಲಿದೆ. ಆದರೆ, ಮಾರ್ಚ್‌ನಲ್ಲಿ ಥಾಣೆಯಲ್ಲಿ ಅವರ ಮೃತದೇಹವೂ ಪತ್ತೆಯಾಗಿತ್ತು. ಆರಂಭದಲ್ಲಿ ವಾಝೆ ಮುಂಬೈ ಪೊಲೀಸರಿಂದ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಎನ್‌ಐಎ ತನಿಖೆ ಆರಂಭಿಸಿ ವಾಝೆ ಅವರನ್ನು ಪ್ರಕರಣದ ಪ್ರಮುಖ ಆರೋಪಿಯನ್ನಾಗಿ ಮಾಡಿದೆ. ಹತ್ತು ಮಂದಿ ಆರೋಪಿಗಳು ಮತ್ತು ಇತರ ಕೆಲವು ಪೊಲೀಸ್ ಸಿಬ್ಬಂದಿ ಕೂಡ ಬಂಧನದಲ್ಲಿದ್ದಾರೆ.

Last Updated : Aug 5, 2022, 9:00 AM IST

ABOUT THE AUTHOR

...view details