ಕರ್ನಾಟಕ

karnataka

ETV Bharat / bharat

Antilia ಪ್ರಕರಣ: ವಾಜೆ ಜಾಮೀನು ಅರ್ಜಿಗೆ ಎನ್​​​ಐಎ ಆಕ್ಷೇಪ

ಮಹಾರಾಷ್ಟ್ರದಲ್ಲಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಜಾಮೀನು ಅರ್ಜಿಗೆ ರಾಷ್ಟ್ರೀಯ ತನಿಖಾ ದಳ ಆಕ್ಷೇಪ ವ್ಯಕ್ತಪಡಿಸಿದೆ.

Antilia bomb scare case: NIA opposes Waze's third default plea
ಆ್ಯಂಟಿಲಿಯಾ ಪ್ರಕರಣ: ವಾಜೆ ಜಾಮೀನು ಅರ್ಜಿಗೆ ಎನ್​​​ಐಎ ಆಕ್ಷೇಪ

By

Published : Sep 18, 2021, 9:04 AM IST

ಮುಂಬೈ(ಮಹಾರಾಷ್ಟ್ರ):ಆ್ಯಂಟಿಲಿಯಾ(Antilia) ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಜಾಮೀನು ಅರ್ಜಿಗೆ ಎನ್​ಐಎ(NIA) ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್​ ನೀಡಿದ್ದ ಅವಧಿಯೊಳಗೆ ಚಾರ್ಜ್​​ಶೀಟ್ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಮನ್ಸುಖ್ ಹಿರೇನ್ ಕೊಲೆ ಪ್ರಕರಣದ ಆರೋಪಿಯೂ ಆಗಿರುವ ವಾಜೆ ಜಾಮೀನು ಪಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದು ಮೂರನೇ ಪ್ರಯತ್ನವಾಗಿದ್ದು, ಜಾಮೀನು ಪಡೆಯಲು ವಾಜೆ ಸಲ್ಲಿಸಿರುವ ಅರ್ಜಿಗೆ ಅರ್ಹತೆಯಿಲ್ಲ. ಅವರು ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ ಎಂದು ಕೋರ್ಟ್​ ಜಾಮೀನು ನಿರಾಕರಿಸಿತ್ತು.

ಮತ್ತೊಮ್ಮೆ ಸಚಿನ್ ವಾಜೆ ಸೆಪ್ಟೆಂಬರ್ 6ರಂದು ಜಾಮೀನು ಅರ್ಜಿ ಸಲ್ಲಿಸಿದ್ದು, ಇದಕ್ಕಿಂತ ಮೊದಲೇ ಸೆಪ್ಟೆಂಬರ್ 3ರಂದು ಎನ್​ಐಎ ಚಾರ್ಜ್​​ಶೀಟ್​​ ಸಲ್ಲಿಸಿದೆ ಎಂದು ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ವಾಜೆ ಅವರ ಜಾಮೀನು ಅರ್ಜಿ ತಿರಸ್ಕಾರ ಮಾಡುವುದು ನ್ಯಾಯಯುತ ಎಂದು ಹೇಳಿದೆ.

ಇದನ್ನೂ ಓದಿ:ಒಂದೇ ದಿನ ಕುಲ್ಗಾಂನಲ್ಲಿ ಎರಡು ಕಡೆ ಉಗ್ರರ ಅಟ್ಟಹಾಸ: ಕಾನ್ಸ್​​ಟೇಬಲ್, ಕಾರ್ಮಿಕ ಸಾವು

ABOUT THE AUTHOR

...view details