ಮುಂಬೈ: ಮಾದಕವಸ್ತು ಮಾರಾಟ ಮಾಡಲು ಒಡಿಶಾದಿಂದ ಮುಂಬೈಗೆ ಇಬ್ಬರು ವ್ಯಕ್ತಿಗಳನ್ನು ಮಹಾರಾಷ್ಟ್ರದ ಆ್ಯಂಟಿ ನಾರ್ಕೋಟಿಕ್ಸ್ ಸೆಲ್‌ನ ಕಾಂದಿವಲಿ ಘಟಕವು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.
ಮಹಾರಾಷ್ಟ್ರದಲ್ಲಿ ಮಾದಕವಸ್ತು ನಿಗ್ರಹದಳ ಕಾರ್ಯಾಚರಣೆ ಆರೋಪಿಗಳಿಂದ ಸುಮಾರು 115 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಗಾಂಜಾದ ಬೆಲೆ 28.75 ಲಕ್ಷ ರೂಪಾಯಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆರೋಪಿಗಳನ್ನು ಇಮ್ರಾನ್ ಅಬ್ರಾರ್ ಹುಸೇನ್ ಅನ್ಸಾರಿ (42) ಮತ್ತು ಇಸ್ಮಾಯಿಲ್ ಸಲೀಂ ಶೇಖ್ (21) ಎಂದು ಗುರುತಿಸಲಾಗಿದ್ದು, ಅವರಿಂದ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.
ಇದನ್ನೂ ಓದಿ:Watch Video: ಕಂದಕದ ಅಂಚಿನಲ್ಲಿ ಕಾರು ಯೂಟರ್ನ್ ಮಾಡಿ ಚಾಲಕನ ದುಸ್ಸಾಹಸ