ನವದೆಹಲಿ: ಜಹಾಂಗೀರಪುರಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ರೋಹಿಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದರಲ್ಲಿ 21 ಆರೋಪಿಗಳನ್ನು ವಿಡಿಯೋ ಮೂಲಕ ಮೇಲೆ ಗುರುತಿಸಿ ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳಿಗೆ ಒಂದು ದಿನ ಪೊಲೀಸ್ ಕಸ್ಟಡಿ ನೀಡಲಾಗಿದೆ. ಈ ವೇಳೆ ಪೊಲೀಸರು ಆರೋಪಿಗಳನ್ನು ರಿಮ್ಯಾಂಡ್‌ಗೆ ಕರೆದೊಯ್ಯುವಾಗ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಆರೋಪಿ ಅನ್ಸಾರ್, ಹೌದು ನಾನೇ ತಪ್ಪಿತಸ್ಥ ಎಂದು ಹೇಳಿದ್ದಾರೆ.
ಅನ್ಸಾರ್ ಈ ಸಂಪೂರ್ಣ ಘಟನೆಯ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ. ಆದರೆ ಕಲ್ಲು ತೂರಾಟದ ಸಮಯದಲ್ಲಿ ಅಸ್ಲಾಂ ಎಂಬಾತ ಮೆರವಣಿಗೆಯ ಮೇಲೆ ಗುಂಡು ಹಾರಿಸಿದ್ದಾನೆ. ಅದರ ವಿಡಿಯೋ ಕೂಡ ಪತ್ತೆಯಾಗಿದೆ. ಅದರ ಆಧಾರದ ಮೇಲೆ ಬಂಧನವಾಗಿರುವ ಇಬ್ಬರೂ ಪ್ರಮುಖ ಆರೋಪಿಗಳ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.