ಬಾರ್ಗಢ, ಒಡಿಶಾ:ಬಾರ್ಗಢ ಜಿಲ್ಲೆಯ ಮೆಂಧಪಾಲಿ ಬಳಿ ಗೂಡ್ಸ್ ರೈಲಿನ ಐದು ಬೋಗಿಗಳು ಹಳಿತಪ್ಪಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಪೊಲೀಸರು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಈ ಘಟನೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಸುಣ್ಣದಕಲ್ಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಹಲವಾರು ವ್ಯಾಗನ್‌ಗಳು ಬಾರ್ಗಢನಲ್ಲಿ ಹಳಿತಪ್ಪಿವೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಪೊಲೀಸರು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ.
ರೈಲು ಸಿಮೆಂಟ್ ಕಂಪನಿಯ ಒಡೆತನದಲ್ಲಿದೆ ಮತ್ತು ಉತ್ಪಾದನಾ ಘಟಕಕ್ಕೆ ಸುಣ್ಣದ ಕಲ್ಲು ಸಾಗಿಸಲು ಮಾತ್ರ ಈ ಮಾರ್ಗವನ್ನು ಬಳಸಲಾಗುತ್ತದೆ. ಸುಣ್ಣದಕಲ್ಲು ತುಂಬಿದ್ದ ಸರಕು ಸಾಗಣೆ ರೈಲಿನ ಐದು ವ್ಯಾಗನ್‌ಗಳು ಭಟ್ಲಿ ಬ್ಲಾಕ್‌ನ ಬಳಿ ಹಳಿತಪ್ಪಿದವು. ಖಾಸಗಿ ಸಿಮೆಂಟ್ ಕಂಪನಿ ನಿರ್ವಹಿಸುತ್ತಿರುವ ರೈಲು, ಡುಂಗುರಿ ಸುಣ್ಣದ ಕಲ್ಲು ಗಣಿಗಳಿಂದ ಕಾರ್ಖಾನೆಗೆ ತೆರಳುತ್ತಿತ್ತು ಎಂದು ಮೂಲಗಳು ತಿಳಿಸಿದ್ದು, ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಏತನ್ಮಧ್ಯೆ, ಖಾಸಗಿ ಸಿಮೆಂಟ್ ಕಂಪನಿ ಈ ಮಾರ್ಗವನ್ನು ನಿರ್ವಹಿಸುತ್ತಿರುವುದರಿಂದ ಈ ವಿಷಯದಲ್ಲಿ ತನ್ನ ಪಾತ್ರವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಘಟನೆ ಕುರಿತು ಮಾಹಿತಿ ಪಡೆದ ಸಿಮೆಂಟ್ ಕಂಪನಿಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಬಾಲಸೋರ್ ರೈಲು ಅಪಘಾತ:ಒಡಿಶಾ ತ್ರೀವಳಿ ರೈಲು ದುರಂತದಲ್ಲಿ ಪಶ್ಚಿಮ ಬಂಗಾಳದ ಸುಮಾರು 81 ಕ್ಕೆ ಜನ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಭಾನುವಾರ ಸಂಜೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 62 ರ ಸಂಖ್ಯೆಯನ್ನು ಉಲ್ಲೇಖಿಸಿದ್ದರು. ಈ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕಾಯ್ದಿರಿಸದ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸುವವರ ಹೆಸರುಗಳು ರೈಲ್ವೆ ಇಲಾಖೆಯಲ್ಲಿ ಸುಲಭವಾಗಿ ಲಭ್ಯವಿಲ್ಲ. ಆ ಪಟ್ಟಿ ಇನ್ನೂ ರಾಜ್ಯ ಸರ್ಕಾರವನ್ನು ತಲುಪಬೇಕಿದೆ. ಹಾಗಾಗಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದರು.
ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತದ ಬಗ್ಗೆಯೂ ರಾಜಕೀಯ ನಡೆಯುತ್ತಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಈ ಘಟನೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು ಮತ್ತು ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದು ಸಂಪೂರ್ಣ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದರು. ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ನಂತಹ ರೈಲುಗಳಲ್ಲಿ ಘರ್ಷಣೆ ತಡೆ ಸಾಧನಗಳು ಏಕೆ ಇರಲಿಲ್ಲ ಎಂದು ಪ್ರಶ್ನಿಸಿದ್ದರು.
ಸಾವಿನ ಸಂಖ್ಯೆಯ ಬಗ್ಗೆ ಪ್ರಶ್ನೆ: ರಾಜ್ಯ ಸಚಿವಾಲಯದ ನವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಮತಾ, ರೈಲ್ವೆಯನ್ನು ಮಾರಾಟ ಮಾಡಲು ಮಾತ್ರ ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಪಘಾತದಲ್ಲಿ ಸಾವಿನ ಸಂಖ್ಯೆಯನ್ನೂ ಪ್ರಶ್ನಿಸಿದ್ದ ಮಮತಾ ಬ್ಯಾನರ್ಜಿ, ಕೇಂದ್ರವು ಅದನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದ್ದರು. ನಮ್ಮ ಪಟ್ಟಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೇಂದ್ರದ ಪಟ್ಟಿಯಲ್ಲಿ ಈ ಅಂಕಿ - ಅಂಶಗಳು ಹೇಗೆ ಕಡಿಮೆಯಾಗುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಸೋಮವಾರ ರಾಜ್ಯ ಸರ್ಕಾರವು ಅಂಕಿ - ಅಂಶದ ಹೊಸ ಡೇಟಾವನ್ನು ಬಿಡುಗಡೆಗೊಳಿಸಿದೆ. 62 ರಿಂದ 81 ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಅಂಕಿ ಅಂಶಗಳ ಪ್ರಕಾರ ಗರಿಷ್ಠ 31 ಜನರು ದಕ್ಷಿಣ 24 ಪರಗಣ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದು ಬಂದಿದೆ.
ದಿ:51 ಗಂಟೆಯಲ್ಲಿ ಎರಡೂ ರೈಲು ಹಳಿಗಳ ದುರಸ್ತಿ.. ಕೈ ಮುಗಿದ ರೈಲ್ವೆ ಸಚಿವ.. ವಿಡಿಯೋ!