ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆ ಸಾವು! - ಈಟಿವಿ ಭಾರತ್​ ಕನ್ನಡ

ಮತ್ತೊಬ್ಬ ರಷ್ಯಾ ಪ್ರಜೆ ಸಾವು - ಈ ಹಿಂದೆ ರಾಯಗಢ ಹೋಟೆಲ್​ನಲ್ಲಿ ಸಾವನ್ನಪ್ಪಿದ್ದ ರಷ್ಯಾ ಪ್ರಜೆ - ಇದೀಗ ಪಾರಾದೀಪ್​ ಬಂದರಿನಲ್ಲಿ ಮತ್ತೊಬ್ಬ ವ್ಯಕ್ತಿ ಸಾವು

ಒರಿಸ್ಸಾದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆ ಸಾವು!
another-russian-citizen-dies-in-orissa

By

Published : Jan 3, 2023, 1:01 PM IST

Updated : Jan 3, 2023, 1:49 PM IST

ಪಾರಾ ದೀಪ್( ಒಡಿಶಾ)​: ರಾಯಗಢದಲ್ಲಿ ರಷ್ಯಾ ಪ್ರಜೆ ಸಾವನ್ನಪ್ಪಿದ ಬೆನ್ನಲ್ಲೇ ಮತ್ತೊಬ್ಬ ರಷ್ಯಾ ಪ್ರಜೆ ಸಾವಿನ ಕುರಿತು ವರದಿಯಾಗಿದೆ. ಒಡಿಶಾದ ಪಾರಾದೀಪ್​ ಬಂದರಿನಲ್ಲಿ ಕಳೆದ ರಾತ್ರಿ ರಷ್ಯಾ ಪ್ರಜೆ ಶವವಾಗಿ ಪತ್ತೆಯಾಗಿದ್ದಾರೆ. ಕಳೆದವಾರವಷ್ಟೇ ರಾಯಗಢ ಜಿಲ್ಲೆಯ ಹೋಟೆಲ್​ನಲ್ಲಿ ರಷ್ಯಾ ಶಾಸಕ ರವೆಲ್​ ಆ್ಯಂಟೊವ್​ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಈ ಸಾವಿನ ನಿಗೂಢತೆ ಇನ್ನು ಬಯಲಾಗಿಲ್ಲ. ಈ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಿದ್ದು, ತನಿಖೆ ಮುಂದುವರೆದಿದೆ.

ಇನ್ನು ಇದೀಗ ಬಂದರಿನಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಮಿಲ್​ ಯಕೂಬ್​ ಸರಜೈ ಎಂದು ಪತ್ತೆ ಮಾಡಲಾಗಿದೆ. ಈತ ಪಾರಾದೀಪ್​ ಬಂದರಿನಲ್ಲಿ ಮುಖ್ಯ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಂದರಿನ ಆ್ಯಂಗರೇಜ್​ ಬಳಿ ಈ ಮೃತ ದೇಹ ಪತ್ತೆಯಾಗಿದೆ.

ಈ ಬಗ್ಗೆ ಮಾತನಾಡಿರುವ ಪಾರಾದೀಪ್​ ಬಂದರು ಪ್ರಾಧಿಕಾರದ ಅಧ್ಯಕ್ಷ ಪಿ ಎಲ್​ ಹರನಾಧ್​, ಇಂದು ಮುಂಜಾನೆ 3 ಗಂಟೆ ಸುಮಾರಿಗೆ ರಷ್ಯಾದ ಮುಖ್ಯ ಇಂಜಿನಿಯರ್​​​ ಸಾವನ್ನಪ್ಪಿದ್ದಾರೆ ಎಂದು ಹಡಗಿನ ಮಾಸ್ಟರ್‌ನಿಂದ ನಮಗೆ ಸಂದೇಶ ಬಂದಿದೆ. ನಮ್ಮ ಬಂದರು ಆರೋಗ್ಯಾಧಿಕಾರಿ ಈಗಾಗಲೇ ಅಲ್ಲಿಗೆ ತಲುಪಿದ್ದಾರೆ. ಎಲ್ಲಾ ವಿಧಿವಿಧಾನಗಳನ್ನು ನಿಯಮ ಬದ್ಧವಾಗಿಯೇ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವಾಡ್ಲಿಮಿರ್​ ಪುಟೀನ್​ ಅವರ ತೀವ್ರ ಟೀಕಾಕಾರರ ಸಾವಿನ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪ್ರಕರಣ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ. ಕಳೆದ ಡಿಸೆಂಬರ್​ ಕೊನೆಯ ವಾರದಲ್ಲಿ 65 ವರ್ಷದ ಆಂಟೊವ್ ತಾವು ಉಳಿದುಕೊಂಡಿದ್ದ ಹೋಟೆಲ್​ ಕೊಠಡಿಯಲ್ಲಿ ಮೃತಪಟ್ಟಿದ್ದರು.

ಕಳೆದ ತಿಂಗಳು ಇಬ್ಬರ ಸಾವು: ಒಂದೇ ಕೊಠಡಿಯಲ್ಲಿ ತಂಗಿದ್ದ 65 ವರ್ಷದ ಆಂಟೊವ್ ಮತ್ತು 61 ವರ್ಷದ ಬುಡಾನೋವ್ ಎರಡು ದಿನಗಳ ಅಂತರದಲ್ಲಿ ಸಾವನ್ನಪ್ಪಿರುವುದು ಸಾಕಷ್ಟು ಅನುಮಾನವನ್ನೂ ಹುಟ್ಟು ಹಾಕಿದೆ. ಡಿ.22ರಂದು ಬೆಳಿಗ್ಗೆ ಹೋಟೆಲ್​ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬುಡಾನೋವ್ ಬಿದ್ದು, ಅಲ್ಲಿಯೇ ಅವರು ಸಾವನ್ನಪ್ಪಿದ್ದರು. ಮೊದಲಿಗೆ ಮಿತಿಮೀರಿದ ಮದ್ಯ ಸೇವನೆಯಿಂದ ಬುಡಾನೋವ್ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೃದಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂಬುವುದಾಗಿ ಬಹಿರಂಗವಾಗಿತ್ತು.

ಮತ್ತೊಂದೆಡೆ, ಆ.24ರಂದು ಪಾವೆಲ್ ಆಂಟೊವ್ ತಾವು ತಂಗಿದ್ದ ಹೋಟೆಲ್​ನ ಕೊಠಡಿಯ​ ಕಿಟಕಿಯಿಂದ ಬಿದ್ದಿದ್ದರು. ಕೊಠಡಿಯಲ್ಲಿ ಕಾಣಿಸಿದೇ ಇದ್ದಾಗ ಹೋಟೆಲ್ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಈ ವೇಳೆ, ಅವರು ಹೋಟೆಲ್​ ಸಮೀಪದ ನಿರ್ಮಾಣ ಹಂತದ ಕಟ್ಟಡದ ಕೆಳಗೆ ಬಿದ್ದಿರುವುದು ಪತ್ತೆಯಾಗಿತ್ತು. ಈ ಸಮಯದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದ್ದರು. ಹೀಗೆ ಆಂಟೊವ್ ಮತ್ತು ಬುಡಾನೋವ್ ಎರಡೇ ದಿನಗಳ ಅಂತರದಲ್ಲಿ ಮೃತಪಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಕುಟುಂಬದ ಅನುಮತಿ ಮೇರೆಗೆ ಪಾವೆಲ್ ಆಂಟೊವ್ ಅವರ ಅಂತ್ಯಸಂಸ್ಕಾರವನ್ನು ಒಡಿಶಾದಲ್ಲೇ ಸೋಮವಾರ ಅಧಿಕಾರಿಗಳು ನೆರವೇರಿಸಿದ್ದರು. ಇದೀಗ ಮರಣೋತ್ತರ ಪರೀಕ್ಷೆ ವರದಿಯು ಆಂತರಿಕ ಗಾಯಗಳೇ ಪಾವೆಲ್​ ಸಾವಿಗೆ ಕಾರಣ ಎಂದು ಹೇಳಿದೆ. ಮತ್ತೊಂದು ವಿಷಯವೆಂದರೆ, ಪಾವೆಲ್​ ತಮ್ಮ 65ನೇ ಹುಟ್ಟುಹಬ್ಬದ ಆಚರಣೆಗಾಗಿ ರಾಯಗಢದಲ್ಲಿ ಪ್ರವಾಸದಲ್ಲಿದ್ದರು. ಸದ್ಯ ಈ ಬಗ್ಗೆ ಒಡಿಶಾ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳ ತಂಡದ ತನಿಖೆಯೂ ನಡೆಸುತ್ತಿದೆ.

ಯಾರು ಈ ಪಾವೆಲ್ ಆಂಟೊವ್?: ಪಾವೆಲ್ ಆಂಟೊವ್ ರಷ್ಯಾದ ಯಶಸ್ವಿ ಉದ್ಯಮಿಯಾಗಿದ್ದಾರೆ. ಅಲ್ಲದೇ, ರಷ್ಯಾದ ಶ್ರೀಮಂತ ಜನಪ್ರತಿನಿಧಿಗಳಲ್ಲೂ ಒಬ್ಬರಾಗಿದ್ದಾರೆ. ವ್ಲಾಡಿಮಿರ್ ಸ್ಟ್ಯಾಂಡರ್ಡ್ ಎಂಬ ಮಾಂಸ ಸಂಸ್ಕರಣಾ ಘಟಕದ ಸಂಸ್ಥಾಪಕರಾಗಿದ್ದರು. 2019ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನವನ್ನೂ ಪಡೆದಿದ್ದ ಆಂಟೊವ್ ಅಂದಾಜು 140 ಮಿಲಿಯನ್​ ಡಾಲರ್​ ಸಂಪತ್ತನ್ನು ಹೊಂದಿದ್ದರು.

ಇದರ ನಡುವೆ ಆಂಟೊವ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು. ಉಕ್ರೇನ್​ ಯುದ್ಧದ ವೇಳೆ​ ಇದೇ ಜೂನ್​ನಲ್ಲಿ ಕೈವ್‌ನ ವಸತಿ ಪ್ರದೇಶದ ಮೇಲಿನ ರಷ್ಯಾದ ಕ್ಷಿಪಣಿ ದಾಳಿಯನ್ನೂ ಆಂಟೊವ್ ಟೀಕಿಸಿದ್ದರು. ಇದೆಲ್ಲವನ್ನೂ ಭಯೋತ್ಪಾದನೆ ಎಂದು ಕರೆಯುವುದು ತುಂಬಾ ಕಷ್ಟ ಎಂದು ವಾಟ್ಸ್​ಆ್ಯಪ್​ ಸಂದೇಶವನ್ನು ಆಂಟೊವ್​ ಹಾಕಿಕೊಂಡಿದ್ದರು. ನಂತರ ಆ ಸಂದೇಶವನ್ನು ಅಳಿಸಲಾಗಿತ್ತು ಎಂದೂ ಹೇಳಲಾಗಿದೆ.

ತನಿಖೆ ಚುರುಕುಗೊಳಿಸಿದ ಕ್ರೈಂ ಬ್ರಾಂಚ್​:ಈಗಾಗಲೇ ಒಡಿಶಾ ಕ್ರೈಂ ಬ್ರಾಂಚ್​​ ಈ ಹಿಂದೆ ಸಾವನ್ನಪ್ಪಿದ್ದ ಇಬ್ಬರು ರಷ್ಯಾ ಪ್ರಜೆಗಳ ಸಾವಿನ ತನಿಖೆಯನ್ನು ಚುರುಕುಗೊಳಿಸಿದೆ. ತನಿಖಾ ತಂಡ, ವ್ಲಾಡಿಮಿರ್​ ಮತ್ತು ಪಾವೆಲ್​ ತಂಗಿದ್ದ ಹೋಟೆಲ್​​ನ ಕೊಠಡಿ ನಂ. 203 ರಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಹೋಟೆಲ್​ ಕೊಠಡಿಯಲ್ಲಿದ್ದ ಚಪ್ಪಲಿಗಳು ಮತ್ತು ಗಾಜು ಮತ್ತು ಇತರ ಸುಪ್ತ ಬೆರಳಚ್ಚುಗಳು ಸೇರಿದಂತೆ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿದೆ.

ತಂಡವು ರೂಮ್ ನಂ.ನಲ್ಲಿ ಸಾಕ್ಷ್ಯಕ್ಕಾಗಿ ಕೂಲಂಕಷವಾಗಿ ಶೋಧ ನಡೆಸಿತು. 309 ಅಲ್ಲಿ ಪಾವೆಲ್ ಆಂಟೋವ್ ಡಿಸೆಂಬರ್ 22 ರಾತ್ರಿಯಿಂದ ಏಕಾಂಗಿಯಾಗಿ ಉಳಿದಿದ್ದರು. ಗಾಜಿನ ಮತ್ತು ನೀರಿನ ಬಾಟಲಿಗಳಂತಹ ವಸ್ತುಗಳ ಮೇಲೆ ಕಂಡುಬಂದ ಬೆರಳಚ್ಚುಗಳನ್ನು ಕ್ರೈಂ ಬ್ರಾಂಚ್​ ತಂಡ ಸಂಗ್ರಹಿಸಿದೆ

ಇದನ್ನೂ ಓದಿ:ರೈಲ್ವೇ ಸೇತುವೆ ಮೇಲೆ ರೀಲ್ಸ್​ ಶೂಟ್​ ಮಾಡಲು ಹೋಗಿ ಇಬ್ಬರು ಸಾವು

Last Updated : Jan 3, 2023, 1:49 PM IST

ABOUT THE AUTHOR

...view details