ಹತ್ರಾಸ್(ಉತ್ತರಪ್ರದೇಶ):ಹತ್ರಾಸ್ನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಕೇಸ್ ಇಡೀ ದೇಶದ ಗಮನ ಸೆಳೆದಿತ್ತು. ಇದೀಗ ಇದೇ ಹತ್ರಾಸ್ನಲ್ಲಿ ಮತ್ತೊಂದು ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. ಹಸಯಾನ್ ಕೊತ್ವಾಲಿ ಪ್ರದೇಶದಲ್ಲಿ ಯುವಕನೊಬ್ಬ, ಯುವತಿಯನ್ನು ಬಲವಂತವಾಗಿ ಎಳೆದೊಯ್ದು ರೇಪ್ ಮಾಡಿದ್ದಲ್ಲದೇ, ಕೈ -ಕಾಲು ಕಟ್ಟಿ ಪಕ್ಕದ ಮನೆಯ ಛಾವಣಿ ಮೇಲೆ ಎಸೆದು ಕ್ರೂರತ್ವ ಮೆರೆದಿದ್ದಾನೆ.
ಘಟನೆ ಏನು?:ಮೇ 16 ರಂದು ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ 18 ವರ್ಷದ ಯುವತಿಯನ್ನು ಅದೇ ಗ್ರಾಮದ ಯುವಕನೊಬ್ಬ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಮಹಡಿಯ ಮೇಲೆ ಎಳೆದುಕೊಂಡು ಹೋಗಿದ್ದಾನೆ. ಬಳಿಕ ಅತ್ಯಾಚಾರ ನಡೆಸಿದ್ದಾನೆ. ಇದು ತಾನು ಮಾಡಿದ್ದು ಎಂದು ಗೊತ್ತಾಗಬಾರದೆಂದು ಯುವತಿಯ ಕೈ - ಕಾಲುಗಳನ್ನು ಕಟ್ಟಿ, ಬಾಯಿಯನ್ನು ಮುಚ್ಚಿ ಪಕ್ಕದ ಮನೆಯ ಟೆರೇಸ್ ಮೇಲೆ ಎಸೆದಿದ್ದಾನೆ.