ಕರ್ನಾಟಕ

karnataka

ETV Bharat / bharat

ಸಿಧು ಮೂಸೆವಾಲಾ ಕೊಲೆ ಪ್ರಕರಣ: ನನ್ನ ಮಗ ಆರೋಪಿಯಾಗಿದ್ದರೆ ಗುಂಡಿಕ್ಕಿ ಎಂದ ತಾಯಿ! - ಸಿಧು ಮೂಸೆವಾಲಾ ಕೊಲೆ ಪ್ರಕರಣ ಸುದ್ದಿ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಟಿಡಾ ಯುವಕನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.

Another nominee by police in Sidhu Moosewala murder case  Sidhu Moosewala murder case news  Sidhu Moosewala murder case update  ಸಿಧು ಮೂಸೆವಾಲಾ ಪ್ರಕರಣದಲ್ಲಿ ಮತ್ತೊಬ್ಬ ಯುವಕನ ಹೆಸರು ಪತ್ತೆ  ಸಿಧು ಮೂಸೆವಾಲಾ ಕೊಲೆ ಪ್ರಕರಣ ಸುದ್ದಿ  ಸಿಧು ಮೂಸೆವಾಲಾ ಕೊಲೆ ಪ್ರಕರಣ ಅಪ್​ಡೇಟ್​
ನನ್ನ ಮಗ ಆರೋಪಿಯಾಗಿದ್ರೆ ಗುಂಡಿಕ್ಕಿ ಕೊಲೆ ಮಾಡಿ ಎಂದ ತಾಯಿ

By

Published : Jun 9, 2022, 12:26 PM IST

ಬಟಿಂಡಾ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಫುಲ್ ಆಕ್ಷನ್ ಮೋಡ್​ನಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಪೊಲೀಸರು ಪಂಜಾಬ್ ಸೇರಿದಂತೆ ಇತರ ರಾಜ್ಯಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಟಿಂಡಾದ ಯುವಕನೊಬ್ಬನ ಹೆಸರು ಕೇಳಿ ಬಂದಿದೆ.

ಬಟಿಂಡಾ ನಿವಾಸಿ ಕೇಶವ್​ ಎಂಬ ಯುವಕನಿಗೂ ಮೂಸೆವಾಲಾ ಹತ್ಯೆಗೆ ಸಂಬಂಧಿವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸರು ಶಂಕಿತ ಆರೋಪಿ ಕೇಶವ್​ಗಾಗಿ ಬಲೆ ಬೀಸಿದ್ದಾರೆ.

ಓದಿ:ಗಾಯಕ ಸಿಧು ಮೂಸೆವಾಲಾ ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯಿ?

ಪೊಲೀಸರು ಕೇಶವ್ ಹೆಸರು ಬಹಿರಂಗ ಮಾಡುತ್ತಿದ್ದಂತೆ ಆರೋಪಿ ಕುಟುಂಬವು ತೀವ್ರ ಚಿಂತೆಗೀಡಾಗಿದೆ. ವಯೋವೃದ್ಧ ತಾಯಿ ಮತ್ತು ಸಹೋದರಿ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ. ಈ ವಿಚಾರದಲ್ಲಿ ತಮಗೂ ಕೇಶವನಿಗೂ ಯಾವುದೇ ಸಂಬಂಧವಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಕೇಶವನನ್ನು ಮನೆಯಿಂದ ಹೊರಹಾಕಿದ್ದೇವೆ. ಆದರೆ ಪೊಲೀಸರು ಪದೇ ಪದೆ ವಿಚಾರಣೆ ಹೆಸರಲ್ಲಿ ನಮಗೆ ಕಿರುಕುಳ ನೀಡುತ್ತಿದ್ದಾರೆ. ಪ್ರಕರಣದಲ್ಲಿ ಕೇಶವ್ ಆರೋಪಿಯಾಗಿದ್ದರೆ ಗುಂಡಿಕ್ಕಿ ಕೊಂದು ಹಾಕಿ. ಅವನ​ ವಿರುದ್ಧ ಸರ್ಕಾರ ಮತ್ತು ಪೊಲೀಸರು ಕ್ರಮ ಕೈಗೊಳ್ಳಿ. ಆದರೆ ನಮಗೆ ಕಿರುಕುಳ ನೀಡಬೇಡಿ ಎಂದು ಕುಟುಂಬಸ್ಥರ ಮನವಿಯಾಗಿದೆ.

ABOUT THE AUTHOR

...view details