ಕರ್ನಾಟಕ

karnataka

ETV Bharat / bharat

ತರನ್ ತಾರನ್ ಗಡಿ ಬಳಿ ಮತ್ತೊಂದು ಡ್ರೋನ್ ಪತ್ತೆ - ಈಟಿವಿ ಭಾರತ ಕನ್ನಡ

ಭಿಖಿವಿಂಡ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಪ್ರೀತೀಂದರ್ ಸಿಂಗ್​, ಬು​ಧವಾರ ಶೋಧದ ಸಮಯದಲ್ಲಿ ಹೊಲವೊಂದರ ಬೇಲಿ ಬಳಿಯಿಂದ ಡ್ರೋನ್ ಅನ್ನು ವಶಪಡಿಸಿಕೊಂಡರು.

ತರನ್ ತಾರನ್ ಗಡಿ ಬಳಿ ಮತ್ತೊಂದು ಡ್ರೋನ್ ಪತ್ತೆ
another-drone-was-spotted-near-taran-taran-border

By

Published : Dec 1, 2022, 4:15 PM IST

ಅಮೃತಸರ್ (ಪಂಜಾಬ್): ಅಮೃತಸರ್ ಮತ್ತು ತರನ್ ತಾರನ್ ಜಿಲ್ಲೆಗಳಲ್ಲಿ ಎರಡು ಡ್ರೋನ್‌ಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಹೊಡೆದುರುಳಿಸಿದ ಎರಡು ದಿನಗಳ ನಂತರ, ಪಂಜಾಬ್ ಪೊಲೀಸರು ಬುಧವಾರ ತರನ್ ತಾರನ್​ನ ವಾನ್ ತಾರಾ ಸಿಂಗ್ ಗ್ರಾಮದಲ್ಲಿ ಮತ್ತೊಂದು ಡ್ರೋನ್ ಅನ್ನು ಬಿಎಸ್​ಎಫ್ ಸಿಬ್ಬಂದಿ​ ವಶಪಡಿಸಿಕೊಂಡಿದೆ.

ಮಾಹಿತಿಯ ಪ್ರಕಾರ, ವಶಪಡಿಸಿಕೊಳ್ಳಲಾದ ಡ್ರೋನ್ ಹಾನಿಗೊಳಗಾದ ಸ್ಥಿತಿಯಲ್ಲಿದ್ದು, ಸೋಮವಾರ ರಾತ್ರಿ ಬಿಎಸ್‌ಎಫ್ ಸೈನಿಕರ ಬುಲೆಟ್‌ ತಗುಲಿ ಹೊಲದಲ್ಲಿ ಬಿದ್ದಿದೆ.

ಭಿಖಿವಿಂಡ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಪ್ರೀತೀಂದರ್ ಸಿಂಗ್, ಬುಧವಾರ ಶೋಧದ ಸಮಯದಲ್ಲಿ ಹೊಲವೊಂದರ ಬೇಲಿ ಬಳಿಯಿಂದ ಡ್ರೋನ್ ಅನ್ನು ವಶಪಡಿಸಿಕೊಂಡರು.


ABOUT THE AUTHOR

...view details