ಕರ್ನಾಟಕ

karnataka

ETV Bharat / bharat

ಎದೆನೋವು ಎಂದು ಆಸ್ಪತ್ರೆಗೆ ದಾಖಲಾದ ಅನ್ನು ಕಪೂರ್: ಆರೋಗ್ಯದಲ್ಲಿ ಚೇತರಿಕೆ - ಈಟಿವಿ ಭಾರತ್ ಕನ್ನಡ ಸುದ್ದಿ

ಹಿರಿಯ ನಟ ಅನ್ನು ಕಪೂರ್​ಗೆ ಎದೆನೋವು - ಗಂಗಾರಾಮ್ ಆಸ್ಪತ್ರೆಗೆ ದಾಖಲು - ಆರೋಗ್ಯದಲ್ಲಿ ಚೇತರಿಕೆ.

ಹಿರಿಯ ನಟ ಅನ್ನು ಕಪೂರ್
ಹಿರಿಯ ನಟ ಅನ್ನು ಕಪೂರ್

By

Published : Jan 26, 2023, 11:03 PM IST

ನವದೆಹಲಿ:ಎದೆನೋವಿನಿಂದ ಬಳಲುತ್ತಿದ್ದ ಹಿರಿಯ ನಟ ಅನ್ನು ಕಪೂರ್ ಅವರನ್ನು ಗುರುವಾರ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಡಾ ಅಜಯ್ ಸ್ವರೂಪ್ ಹೇಳಿದ್ದಾರೆ. ಕಪೂರ್ ಅವರನ್ನು ಹೃದ್ರೋಗ ವಿಭಾಗಕ್ಕೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿಯನ್ನು ಡಾ ಸುಶಾಂತ್ ವಾಟಾಲ್ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕಪೂರ್ ಮ್ಯಾನೇಜರ್ ಸಚಿನ್, 'ಅನ್ನು ಕಪೂರ್ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಇಂದು ಮುಂಜಾನೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ, ಅವರನ್ನು ನಿಗಾದಲ್ಲಿ ಇರಿಸಲಾಗಿದೆ. ನಂತರ ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಅನ್ನು ಕಪೂರ್ ಊಟವನ್ನೂ ಮಾಡುತ್ತಿದ್ದಾರೆ ಮತ್ತು ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ‘‘ ಎಂದು ಮಾಹಿತಿ ನೀಡಿದರು.

'ಹಮ್', 'ಏಕ್ ರುಕಾ ಹುವಾ ಫೈಸ್ಲಾ', 'ರಾಮ್ ಲಖನ್', 'ಘಾಯಲ್', 'ಹಮ್ ಕಿಸಿಸೆ ಕಮ್ ನಹೀನ್', 'ಐತ್ರಾಜ್', '7 ಖೂನ್ ಮಾಫ್', 'ಜಾಲಿ' ಮುಂತಾದ ಚಿತ್ರಗಳಲ್ಲಿ ಅತ್ಯುತ್ತಮ ಅಭಿನಯ ಮಾಡಿದ ಹೆಗ್ಗಳಿಕೆ ಇವರದ್ದು. LLB 2' ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಅವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹಾಸ್ಯ-ನಾಟಕ 'ವಿಕ್ಕಿ ಡೋನರ್'ನಲ್ಲಿನ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಳೆದ ವರ್ಷ OTT ಪ್ಲಾಟ್‌ಫಾರ್ಮ್, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಂಡ 'ಕ್ರ್ಯಾಶ್ ಕೋರ್ಸ್' ವೆಬ್ ಶೋನಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಅನ್ನು ಕಪೂರ್​ ಯಾರು?:ಅನ್ನು ಕಪೂರ್ 20 ಫೆಬ್ರವರಿ 1956 ರಂದು ಭೋಪಾಲ್‌ನಲ್ಲಿ ಜನಿಸಿದರು. ಅವರ ಮೂಲ ಹೆಸರು ಅನಿಲ್ ಕಪೂರ್. ನಟರಲ್ಲದೇ ಅವರು ಗಾಯಕ, ನಿರ್ದೇಶಕ, ರೇಡಿಯೋ ಜಾಕಿ ಮತ್ತು ಟಿವಿ ನಿರೂಪಕರೂ ಆಗಿದ್ದಾರೆ. 100 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಟ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಗಾಯಕರಾಗಿ ಅವರು ವೃತ್ತಿಜೀವನವನ್ನು ಸವೆಸಿದ್ದಾರೆ. ನಟನೆಯ ಹೊರತಾಗಿ ಅನ್ನು ಅವರು 92.7 ಬಿಗ್ ಎಫ್‌ಎಂನಲ್ಲಿ ಪ್ರಸಾರವಾಗುವ 'ಸುಹಾನಾ ಸಫರ್ ವಿತ್ ಅಣ್ಣು ಕಪೂರ್' ಎಂಬ ರೇಡಿಯೊ ಕಾರ್ಯಕ್ರಮವನ್ನೂ ಸಹ ಮಾಡುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ರಾಷ್ಟ್ರೀಯ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಟಿವಿ ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅನ್ನು ಕಪೂರ್ ಅವರ ತಂದೆಯವರು ನಗರ ಮತ್ತು ಪಟ್ಟಣಗಳಲ್ಲಿ ಪ್ರದರ್ಶನ ನೀಡುವ ಪಾರ್ಸಿ ಥಿಯೇಟರ್ ಕಂಪನಿಯ ಮಾಲೀಕರಾಗಿದ್ದರು. ಅವರ ತಾಯಿ ಉರ್ದು ಶಿಕ್ಷಕಿಯಾಗಿದ್ದರು. ಅವರ ತಂದೆಯ ಅಜ್ಜ ರಾಮ್ ಕೃಪಾ ರಾಮ್ ಕಪೂರ್ ಬ್ರಿಟಿಷ್ ಸೈನ್ಯದಲ್ಲಿ ವೈದ್ಯರಾಗಿದ್ದರು. ಅವರ ಮುತ್ತಜ್ಜ ಲಾಲಾ ಗಂಗಾ ರಾಮ್ ಕಪೂರ್ ಅವರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕೊಲ್ಲಲ್ಪಟ್ಟ ಕ್ರಾಂತಿಕಾರಿಯಾಗಿದ್ದರು. ಆರ್ಥಿಕ ಅಡಚಣೆಯಿಂದಾಗಿ ಅನ್ನು ಕಪೂರ್ ಶಾಲೆ ಬಿಡಬೇಕಾಯಿತು. ತಂದೆಯ ಒತ್ತಾಯದ ಮೇರೆಗೆ ನಾಟಕ ಕಂಪನಿಗೆ ಸೇರಿದರು. ನಂತರ 1976ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿಕೊಂಡರು. ಆ ಬಳಿಕ ಪದವಿಯನ್ನು ಪೂರ್ಣಗೊಳಿಸಿದ ಅವರು, ಬಾಂಬೆಯಲ್ಲಿ ನಾಟಕದಲ್ಲಿ ಅಭಿನಯಿಸಿದರು.ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಇವರ ಅಭಿನಯವನ್ನು ಗುರುತಿಸಿ ಅವಕಾಶ ಕೊಟ್ಟಿದ್ದರು.

ಓದಿ :18ರ ಚಿರಯುವಕನ ದೇಹ ಹೊಂದಲು ವರ್ಷಕ್ಕೆ 2 ಮಿಲಿಯನ್​ ಡಾಲರ್​ ಖರ್ಚು ಮಾಡುತ್ತಿರುವ 45ರ ಸಿಇಒ!

ABOUT THE AUTHOR

...view details