ಚೆನ್ನೈ(ತಮಿಳುನಾಡು): ಬಜೆಟ್ ಅಧಿವೇಶನದ ವೇಳೆ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದರು. ಈ ವೇಳೆ ತಮ್ಮ ಭಾಷಣದ ಉದ್ದಕ್ಕೂ ಮೇಲಿಂದ ಮೇಲೆ ತಮಿಳುನಾಡಿನ ವಿಚಾರ ಪ್ರಸ್ತಾಪ ಮಾಡಿದರು. ಇದೇ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳಿದಾಗ ಮೈ ತಮಿಳು ಹೂಂ ನಾ(Main Tamil hoon na) ನಾನು ತಮಿಳಿಗ ಎಂದು ಹೇಳಿ ಅಲ್ಲಿಂದ ತೆರಳಿದ್ದರು. ಈ ಹೇಳಿಕೆಗೆ ಇದೀಗ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿರಿ:ಲೋಕಸಭೆಯಲ್ಲಿ ಮೇಲಿಂದ ಮೇಲೆ ತಮಿಳುನಾಡು ಪ್ರಸ್ತಾಪ.. 'ನಾನು ತಮಿಳಿಗ' ಎಂದ ರಾಹುಲ್ ಗಾಂಧಿ!
ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ರಾಹುಲ್ ಗಾಂಧಿ ಅಪ್ರಸ್ತುತವಾಗಿ ಮಾತನಾಡಿದ್ದಾರೆ. "ತಮಿಳುನಾಡಿನಲ್ಲಿ ಬರುವ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನ ಕಾದು ನೋಡಿ, ತಮಿಳುನಾಡಿನ ಮಣ್ಣಿನ ಮಗನಾದ ರಾಹುಲ್ ಗಾಂಧಿ" ಎಂದು ಟ್ವೀಟ್ ಮಾಡಿದ್ದಾರೆ.
ಬುಧವಾರ ಭಾಷಣ ಮಾಡ್ತಿದ್ದ ವೇಳೆ ಮೇಲಿಂದ ಮೇಲೆ ತಮಿಳುನಾಡಿನ ವಿಚಾರ ಪ್ರಸ್ತಾಪ ಮಾಡಿರುವ ರಾಹುಲ್ ಗಾಂಧಿ, ಯಾವುದೇ ಕಾಲಕ್ಕೂ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇವರ ಹೇಳಿಕೆಗೆ ಈಗಾಗಲೇ ಅನೇಕ ಕೇಂದ್ರ ಸಚಿವರು, ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ ರಾಹುಲ್ ಗಾಂಧಿ ಮಾತಿಗೆ ಧನ್ಯವಾದ ಹೇಳಿದ್ದಾರೆ.