ಕರ್ನಾಟಕ

karnataka

ETV Bharat / bharat

ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಕೇಸ್​ಗೆ ಟ್ವಿಸ್ಟ್: ಬಾಯಿ ಮುಚ್ಚಿ ಕೋಣೆಯೊಳಗೆ ಎಳೆದೊಯ್ದಿದ್ದರು ಎಂದ ಪ್ರತ್ಯಕ್ಷದರ್ಶಿ

ಸಾಕಷ್ಟು ಸಂಚಲಕ ಮೂಡಿಸಿರುವ ಉತ್ತರಾಖಂಡ ರೆಸಾರ್ಟ್‌ನ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ ಎಸ್‌ಐಟಿ ಮುಂದೆ ಪ್ರಮುಖ ಸಂಗತಿಗಳ ಮಾಹಿತಿ ನೀಡಿದ್ದಾರೆ.

By

Published : Oct 1, 2022, 5:50 PM IST

ankita-murder-case-eyewitness-they-gagged-her-mouth-and-dragged-her-inside
ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಕೇಸ್​ಗೆ ಟ್ವಿಸ್ಟ್: ಬಾಯಿ ಮುಚ್ಚಿ ಕೋಣೆಯೊಳಗೆ ಎಳೆದೊಯ್ದಿದ್ದರು ಎಂದ ಪ್ರತ್ಯಕ್ಷದರ್ಶಿ

ಡೆಹ್ರಾಡೂನ್ (ಉತ್ತರಾಖಂಡ): ರೆಸಾರ್ಟ್‌ನ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಟ್ವಿಸ್ಟ್ ಸಿಕ್ಕಿದೆ. ಅದೇ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಎಸ್‌ಐಟಿ ವಿಚಾರಣೆ ವೇಳೆ ಕೆಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದ ರೆಸಾರ್ಟ್‌ನಲ್ಲೇ ಅನುಜ್ (ಹೆಸರು ಬದಲಾಯಿಸಲಾಗಿದೆ) ಎಂಬ ಪ್ರತ್ಯಕ್ಷದರ್ಶಿ ಅಂಕಿತಾ ಹತ್ಯೆಯಾದ ದಿನ ರೆಸಾರ್ಟ್‌ನ ಮಾಲೀಕ ಪುಲ್ಕಿತ್ ಆರ್ಯ ಮತ್ತು ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ರೆಸಾರ್ಟ್‌ನಲ್ಲಿದ್ದರು ಎಂದು ಹೇಳಿದ್ದಾರೆ. ಅಲ್ಲದೇ, ಮಾಲೀಕ ಪುಲ್ಕಿತ್ ಆರ್ಯ ಅಂಕಿತಾ ಬಾಯಿ ಮುಚ್ಚಿ ಕೋಣೆಯೊಳಗೆ ಕರೆದುಕೊಂಡು ಹೋದಾಗ ಆಕೆ ಸಹಾಯಕ್ಕಾಗಿ ಕೂಗುವುದನ್ನು ತಾನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

ಬಾಯಿ ಮುಚ್ಚಿ ಕೋಣೆಯೊಳಗೆ ಎಳೆದೊಯ್ದರು:'ಸೆಪ್ಟೆಂಬರ್​ 18ರಂದು ನಾನು ರೆಸಾರ್ಟ್​ಗೆ ಬಂದ ಅತಿಥಿಗಳ ಸಾಮಗ್ರಿಗಳನ್ನು ಮಹಡಿಯ ಮೇಲೆ ಇಡಲು ಹೋದಾಗ ಅಂಕಿತಾರನ್ನು ನೋಡಿದೆ. ಅಂಕಿತಾ ಸಹಾಯಕ್ಕಾಗಿ ಅಳುತ್ತಿದ್ದರು. ಆದರೆ, ಸರ್ (ಪುಲ್ಕಿತ್) ಅಂಕಿತಾ ಬಾಯಿಯನ್ನು ಮುಚ್ಚಿ ಕೋಣೆಯೊಳಗೆ ಎಳೆದೊಯ್ದರು' ಎಂದು ಎಸ್‌ಐಟಿ ವಿಚಾರಣೆ ವೇಳೆ ಅನುಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಅಂಕಿತಾ ಹತ್ಯೆ ಪ್ರಕರಣ : ಆರೋಪಿಗಳ ಪರ ವಾದಿಸದಿರಲು ವಕೀಲರ ನಿರ್ಧಾರ

ಎಸ್‌ಐಟಿ ಅಧಿಕಾರಿಗಳು ರೆಸಾರ್ಟ್​ಗೆ ಬಂದ ಅತಿಥಿಗಳ ಬಗ್ಗೆ ವಿಚಾರಿಸಿದಾಗ ಅನುಜ್, 'ಅತಿಥಿಗಳು ಎಲ್ಲಿಂದ ಬಂದರು ಎಂದು ನನಗೆ ಗೊತ್ತಿಲ್ಲ. ಆದರೆ, ಅಂಕಿತ್ ಗುಪ್ತಾ ಸರ್ ಅವರನ್ನು ಅತಿಥಿಗಳು ಭೇಟಿ ಮಾಡಿ ಹೋದರು. ನಾನು ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದಾಗ ಅಂಕಿತ್ ಸರ್ ಜೊತೆ ನಾಲ್ವರು ಅತಿಥಿಗಳು ನಿಂತಿದ್ದರು. ಎಲ್ಲರೂ ಗಟ್ಟಿಮುಟ್ಟಾದ ಯುವಕರಾಗಿದ್ದು, ಕಪ್ಪು ಕಾರಿನಲ್ಲಿ ಬಂದಿದ್ದರು ಎಂದು ತಿಳಿಸಿದ್ದಾರೆ.

ಮಾಲೀಕರು ಅಂಕಿತಾಗೆ ಈ ಹಿಂದೆಯೂ ತೊಂದರೆ ನೀಡಿದ್ದೀರಾ ಎಂದು ಕೇಳಿದಾಗ, 'ಈ ಹಿಂದೆಯೂ ನಶೆಯಲ್ಲಿ ಅಂಕಿತಾ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ಪ್ರತ್ಯಕ್ಷದರ್ಶಿ ಅನುಜ್ ಬಹಿರಂಗಪಡಿಸಿದ್ದಾರೆ.

ಅಂಕಿತಾ ಭಂಡಾರಿ ಪ್ರಕರಣದ ಹಿನ್ನೆಲೆ:ಉತ್ತರಾಖಂಡದ ಬಿಜೆಪಿ ಮುಖಂಡ ವಿನೋದ ಆರ್ಯ ಪುತ್ರನಿಗೆ ಸೇರಿದ ರೆಸಾರ್ಟ್​ನಲ್ಲಿ ರಿಸೆಪ್ಷನಿಸ್ಟ್ ಆಗಿ 19 ವರ್ಷದ ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದರು. ಆದರೆ, ಏಕಾಏಕಿ ನಾಪತ್ತೆಯಗಿದ್ದ ಅಂಕಿತಾ ಸೆಪ್ಟೆಂಬರ್​ 24ರಂದು ಶವವಾಗಿ ಪತ್ತೆಯಾಗಿದ್ದರು. ರೆಸಾರ್ಟ್ ಮಾಲೀಕರಾದ ವಿನೋದ ಆರ್ಯ ಮಗ ಪುಲ್ಕಿತ್ ಆರ್ಯ ಮತ್ತಿತರರು ಸೇರಿಕೊಂಡು ಕೊಲೆ ಮಾಡಿದ್ದರು.

ಈ ಕೊಲೆಯನ್ನು ಪುಲ್ಕಿತ್ ಆರ್ಯ ಕೂಡ ಒಪ್ಪಿಕೊಂಡಿದ್ದು, ಈಗಾಗಲೇ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಂಕಿತಾ ಭಂಡಾರಿ ನಾಪತ್ತೆಯಾಗಿರುವುದು ಗೊತ್ತಿದ್ದು, ಮಾಹಿತಿ ನೀಡದ ಆರೋಪದ ಮೇಲೆ ಕಂದಾಯ ಅಧಿಕಾರಿ (ಪಟ್ವಾರಿ) ವೈಭವ್ ಪ್ರತಾಪ್ ಎಂಬುವವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಇದನ್ನೂ ಓದಿ:ಅಂಕಿತಾ ಭಂಡಾರಿ ಕೊಲೆ ಪ್ರಕರಣ: ರೊಚ್ಚಿಗೆದ್ದ ಜನರಿಂದ ಬಿಜೆಪಿ ನಾಯಕನ ಪುತ್ರನ ಫ್ಯಾಕ್ಟರಿಗೆ ಬೆಂಕಿ

ABOUT THE AUTHOR

...view details